ಇಂದಿನಿಂದ ಅಂಚೆ ಕಚೇರಿಯಲ್ಲೇ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿ..
ನವದೆಹಲಿ:ಸೆಪ್ಟೆಂಬರ್ 28 ರಿಂದ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ ಗಳಲ್ಲಿ () ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿಂದ () ಆನ್‌ಲೈನ್ ಮೂಲಕ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ ಗಳಿಗೆ () ಅರ್ಜಿ ಸಲ್ಲಿಸಲು ಸಾಧ್ಯ ವಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
28 ಸೆಪ್ಟೆಂಬರ್ ಬುಧವಾರದಿಂದ ಪ್ರಾರಂಭವಾಗುವ ಭಾರತದಾದ್ಯಂತ ಎಲ್ಲಾ ಆನ್‌ ಲೈನ್  ಗಳಲ್ಲಿ  ಸೇವೆಗಳಿಗೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಸೇರಿಸಲು ಸಚಿವಾಲಯವು ನಿರ್ಧರಿಸಿದೆ.
ಈ  ಅಪ್ಲಿಕೇಶನ್ ಸೌಲಭ್ಯವನ್ನು  ಗಳಿಗೆ ವಿಸ್ತರಿಸುವಲ್ಲಿ ಸಚಿವಾಲಯವು ತೆಗೆದುಕೊಂಡ ಕ್ರಮವು ವಿದೇಶದಲ್ಲಿ ಉದ್ಯೋಗ ಬಯಸುವ ಭಾರತೀಯ ನಾಗರಿಕರಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಶಿಕ್ಷಣ, ದೀರ್ಘಾವಧಿಯ ವೀಸಾ, ವಲಸೆ ಇತ್ಯಾದಿ ಗಳಂತಹ ಇತರ  ಅವಶ್ಯಕತೆಗಳ ಬೇಡಿಕೆಯನ್ನು ಪೂರೈಸುತ್ತದೆ’ ಎಂದು ಹೇಳಿಕೆ ತಿಳಿಸಿದೆ.