ಉಚಿತ ಆಹಾರ ಧಾನ್ಯ ಯೋಜನೆ ಮೂರು ತಿಂಗಳವರೆಗೆ ವಿಸ್ತರಣೆ
ನವದೆಹಲಿ:ಪ್ರಧಾನ ಮಂತ್ರಿ ಗ್ರಾಮೀಣ ಕಲ್ಯಾಣ ಅನ್ನ ಯೋಜನೆಯನ್ನು ಇನ್ನೂ ಮೂರು ತಿಂಗಳವರೆಗೆ ಕೇಂದ್ರ ಸರ್ಕಾರವಿಸ್ತರಿಸಿದೆ.
 ಯೋಜನೆಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಸೆ.30ರವರೆಗೆ ನಿಗದಿಯಾಗಿದ್ದ ಅದರ ಅವಧಿ ಮುಗಿಯುವ ಎರಡು ದಿನಗಳ ಮುಂಚಿತ ವಾಗಿ ವಿಸ್ತರಣೆ ನಡೆದಿದೆ. ಈ ಯೋಜನೆಯನ್ನು ಮೊದಲು ಈ ವರ್ಷದ ಮಾರ್ಚ್‌ನಲ್ಲಿ ಸೆಪ್ಟೆಂಬರ್ 30ರವರೆಗೆ, ಆರು ತಿಂಗಳ ಕಾಲ ವಿಸ್ತರಿಸಲಾಯಿತು.
ಮೊದಲ ಬಾರಿಗೆ ಕೋವಿಡ್-19 ಲಾಕ್‌ಡೌನ್ ಅನ್ನು ದೇಶಾದ್ಯಂತ ಜಾರಿಗೊಳಿಸಿದಾಗ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಘೋಷಿಸಲಾಗಿತ್ತು. ಪ್ರಥಮ ಘೋಷಣೆಯಂತೆ ಈ ಯೋಜನೆ 2022ರ ಮಾರ್ಚ್ 31ರಂದು ಕೊನೆಗೊಳ್ಳ ಬೇಕಿತ್ತು.
ಸರ್ಕಾರ ಪ್ರತಿ ವ್ಯಕ್ತಿಗೆ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸುತ್ತದೆ. ಇದರಲ್ಲಿ ನೇರ ಲಾಭ ವರ್ಗಾವಣೆಯ ಅಡಿಯಲ್ಲಿರುವವರೂ ಸೇರಿದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಇರುವ 80 ಕೋಟಿಗೂ ಹೆಚ್ಚು ಫಲಾನುಭವಿ ಗಳಿದ್ದಾರೆ.