ಛತ್ತೀಸ್‌ಗಢ: 4.8 ತೀವ್ರತೆ ಭೂಕಂಪ
ಛತ್ತೀಸ್‌ಗಢ:ಸುರ್ಗುಜಾ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 5.28 ಕ್ಕೆ ಅಂಬಿಕಾಪುರ ಬಳಿ ಭೂಮಿ ಕಂಪಿಸಿದ್ದು, ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.8 ರಷ್ಟು ದಾಖಲಾಗಿದೆ.
ಭೂಕಂಪದ ಕೇಂದ್ರ ಬಿಂದು ಅಂಬಿಕಾಪುರದಿಂದ 65 ಕಿ.ಮೀ ದೂರದಲ್ಲಿದೆ ಎಂದು ಕೇಂದ್ರ ಹೇಳಿದೆ. ಭೂಮಿಯ ಒಳಭಾಗದಲ್ಲಿ 10 ಕಿಲೋಮೀಟರ್ ಆಳದಲ್ಲಿ ಚಲನೆಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.