ಓಆರ್‌ಎಸ್‌ ಸಂಶೋಧಕ ವೈದ್ಯ ಡಾ.ದಿಲೀಪ್‌ ಮಹಲನಾಬಿಸ್ ನಿಧನ
ಕೋಲ್ಕತ್ತ:ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್‌ ಅನ್ನು ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳ ಉಳಿವಿಗೆ ಕಾರಣವಾಗಿದ್ದ ವೈದ್ಯ ಡಾ. ದಿಲೀಪ್‌ ಮಹಲನಾಬಿಸ್ (88) ಕೋಲ್ಕತ್ತದಲ್ಲಿ ಕೊನೆಯುಸಿರೆಳೆದಿದ್ದಾರೆ.
1970 ರ ದಶಕದಲ್ಲಿ ಪಶ್ಚಿಮ ಬಂಗಾಳದ ಬಂಗಾವ್ ಬಳಿಯ ಶಿಬಿರಗಳಲ್ಲಿ ಲಕ್ಷಾಂತರ ಬಾಂಗ್ಲಾದೇಶದ ನಿರಾಶ್ರಿತರಿಗೆ ಚಿಕಿತ್ಸೆ ನೀಡುವಾಗ ದಿಲೀಪ್ ಅವರು ಮೊದಲ ಬಾರಿಗೆ  ಅನ್ನು ಬಳಸಿದರು.
ದಿಲೀಪ್ ಈ  ಮೂಲಕ ಕಾಲರಾದಿಂದ ಬಳಲುತ್ತಿರುವ ಹಲವಾರು ಜನರನ್ನು ಗುಣಪಡಿಸಿದರು ಮತ್ತು ಇದು ಜೀವ ನೀಡುವ ಸೂತ್ರವೆಂದು ಸಾಬೀತಾಯಿತು.
ದಿಲೀಪ್ ಮಹಲನಾಬಿಸ್ ಅವರು ತಮ್ಮ ಅಸಾಧಾರಣ ಕೆಲಸಕ್ಕಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಸಂಸ್ಥೆಗಳು ಸಹ ವರ್ಷಗಳಿಂದ ವ್ಯಾಪಿಸಿರುವ ಅವರ ಕೆಲಸವನ್ನು ಗುರುತಿಸಿವೆ.
ದಿಲೀಪ್ ಉಪ್ಪು, ಗ್ಲೂಕೋಸ್‌ ಹಾಗೂ ಬೇಕಿಂಗ್‌ ಸೋಡಾ ಮಿಶ್ರಣದಿಂದಾಗಿ ಅತಿಸಾರಕ್ಕೆ ಸುಲಭ ಚಿಕಿತ್ಸೆ ಕಂಡುಹಿಡಿದರು.
1990 ರಲ್ಲಿ, ಅವರು ಢಾಕಾದ ಪ್ರಸಿದ್ಧ  ನಲ್ಲಿ ಕ್ಲಿನಿಕಲ್ ಸಂಶೋಧನಾ ಅಧಿಕಾರಿಯಾಗಿ ನೇಮಕಗೊಂಡರು.