`ಅಮೆಜಾ಼ನ್‌ನ ಮುಖಗಳು’: ಡೆಲಿವರಿ ಪಾರ್ಟ್ನರ್ ಅಸೋಸಿಯೇಟ್ ಸುಮಾ ವಿ. ರನ್ನು ಭೇಟಿಯಾಗಿ…
ಅಮೆಜಾ಼ನ್‌ನಲ್ಲಿ ನೂರಾರು ಸಾವಿರ ಮುಖಗಳು ಸರಿಸಾಟಿ ಇರದ ಗ್ರಾಹಕ ಅನುಭವ ಪೂರೈಸುತ್ತಿದ್ದಾರೆ. ಎಲ್ಲ ಉದ್ಯೋಗಿಗಳು, ಅಸೋಸಿಯೇಟ್‌ಗಳು, ಮಾರಾಟಗಾರರು ಮತ್ತು ಪಾಲುದಾರರು ಈ ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸಂತೋಷಪಡಿಸಲು ಒಟ್ಟಿಗೆ ಬಂದಿದ್ದಾರೆ. ಇಲ್ಲಿದೆ, ಹೆಮ್ಮೆಯ ತಾಯಿ, ಮಡದಿ ಮತ್ತು ಅಮೆಜಾ಼ನ್‌ನ ಡೆಲಿವರಿ ಸರ್ವೀಸ್ ಪಾರ್ಟ್ನರ್‌ನ ಡೆಲಿವರಿ ಅಸೋಸಿಯೇಟ್ ಅವರ ಕಥೆ ಇಲ್ಲಿದೆ.
ಮಹಿಳೆಯರಿಗೆ ತಮ್ಮ ಉದ್ಯೋಗ ಮತ್ತು ಸಂತೋಷಕರ ಕುಟುಂಬ ಜೀವನದ ನಡುವೆ ಸಮತೋಲನ ಕಾಪಾಡುವುದು ಸುಲಭ ವಲ್ಲ. ಬೆಂಗಳೂರಿನಲ್ಲಿ ಜನಿಸಿದ ಮತ್ತು ಬೆಳೆದ ಹಾಗೂ ತನ್ನ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವಿಸುತ್ತಿರುವ ಸುಮಾ ವಿ. ಅವರನ್ನು ಭೇಟಿಯಾಗಿರಿ. ಅವರ ಪತಿ ಕುಟುಂಬದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕಾರ್ಪೆಂಟರ್ ಕೆಲಸ ಮಾಡುತ್ತಾರೆ.
ಸುಮಾ ಸದಾ ಆರ್ಥಿಕವಾಗಿ ಸ್ವತಂತ್ರವಾಗಿರುವ ಕನಸು ಕಾಣುತ್ತಿದ್ದರು ಇದರಿಂದ ಅವರು ತಮ್ಮ ಪತಿ, ಕುಟುಂಬಕ್ಕೆ ಬೆಂಬಲಿಸು ವುದಲ್ಲದೆ ಅವರ ಮಕ್ಕಳಿಗೆ ಉತ್ತಮ ಜೀವನ ಕಟ್ಟಿಕೊಡಬಹುದು ಎನ್ನುವ ಬಯಕೆ ಹೊಂದಿದ್ದರು. “ನನ್ನ ಕೆಲಸವು ನನಗೆ ಆರ್ಥಿಕವಾಗಿ ಸ್ವತಂತ್ರವಾಗಿರಲು ನೆರವಾಗಿರುವುದೇ ಅಲ್ಲದೆ ಆತ್ಮವಿಶ್ವಾಸ ಮತ್ತು ಹೆಮ್ಮೆಯನ್ನು ಕೂಡಾ ತಂದಿದೆ. ನನ್ನ ಜೀವನ ಸಾಕಷ್ಟು ಬದಲಾಗಿದೆ ಮತ್ತು ಉತ್ತಮಗೊಂಡಿದೆ. ನಾನು ಈಗ ಸಂತೋಷದ ತಾಯಿ, ಪತ್ನಿ ಮತ್ತು ಉದ್ಯೋಗಿಯೂ ಆಗಿದ್ದೇನೆ. ನನ್ನ ಮಕ್ಕಳು ನನ್ನ ಕುರಿತು ಹೆಮ್ಮೆ ಪಡುತ್ತಾರೆ ಮತ್ತು ನನ್ನ ಕುಟುಂಬಕ್ಕೆ ಬೆಂಬಲಿಸುವಲ್ಲಿ ಆನಂದ ಪಡೆಯುತ್ತೇನೆ” ಎನ್ನುತ್ತಾರೆ.
ನನ್ನ ಮಕ್ಕಳು ಈ ಹಬ್ಬದ ಋತುವಿಗೆ ಸದಾ ಉತ್ಸುಕರಾಗಿರುತ್ತಾರೆ, ಏಕೆಂದರೆ ಅದು ಸಂಭ್ರಮಾಚರಣೆಗಳು, ಕುಟುಂಬಗಳ ಔತಣಕೂಟ ಮತ್ತು ಉಡುಗೊರೆಗಳ ವಿನಿಮಯದ ಸಮಯವಾಗಿದೆ. ಈ ಹಬ್ಬದ ಸಮಯ ಉಡುಗೊರೆ ನೀಡಲು, ಗ್ರಾಹಕರು ಇತರರಿಗೆ ಉಡುಗೊರೆ ಕೊಳ್ಳುತ್ತಾರೆ ಮತ್ತು ನಾವು ಆ ಉಡುಗೊರೆಗಳನ್ನು ಡೆಲಿವರಿ ಮಾಡಿದಾಗ ಅದು ಅವರಿಗೆ ಆನಂದ ತರುತ್ತದೆ, ಅವರ ಮುಖಗಳಲ್ಲಿ ನಗುವನ್ನು ನೋಡುವುದು ನನಗೂ ಸಂತೋಷ ತರುತ್ತದೆ” ಎಂದರು.
ಸುಮಾ ಅವರು ದೃಢ ನಿರ್ಧಾರ ಹೊಂದಿದ್ದರೆ ಹೇಗೆ ಅವರು ಬಯಸಿದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ಜೀವನ ಉದಾಹರಣೆ ಎನ್ನುತ್ತಾರೆ. ಸುಮಾ ಅವರ ಪೂರ್ಣ ಕಥೆಯನ್ನು ವೀಕ್ಷಿಸಿರಿ.