ಇಂಪ್ಯಾಕ್ಟ್ ಗುರು ಫೌಂಡೇಷನ್ ಮತ್ತು ಪ್ರಿಸ್ಟಿನ್ ಕೇರ್‌ನಿಂದ `ಸೇವ್ ದಿ ಸೈಟ್’ಗೆ ಚಾಲನೆ
• ದುರ್ಬಲ ವರ್ಗದವರಿಗೆ ಕೆಟರಾಕ್ಟ್ ಶಸ್ತ್ರ ಚಿಕಿತ್ಸೆಗಳನ್ನು ನಡೆಸುವ ಉಪಕ್ರಮ
ನವದೆಹಲಿ:ವಿಶ್ವ ದೃಷ್ಟಿ ದಿನದ ಅಂಗವಾಗಿ ಸಾರ್ವತ್ರಿಕ ಆರೋಗ್ಯಸೇವೆ ಉತ್ತೇಜಿಸುವ ಇಂಪ್ಯಾಕ್ಟ್ ಗುರು ಫೌಂಡೇಷನ್ (ಐಜಿಎಫ್), ಮುಂಚೂಣಿಯ ಆರೋಗ್ಯಸೇವಾ ಪೂರೈಕೆದಾರ ಪ್ರಿಸ್ಟಿನ್ ಕೇರ್‌ನೊಂದಿಗೆ `ಸೇವ್ ದಿ ಸೈಟ್(ದೃಷ್ಟಿ ಉಳಿಸಿ)’ ಅಭಿಯಾನಕ್ಕೆ ಕೈ ಜೋಡಿಸಿದೆ.
ಈ ಉಪಕ್ರಮದ ಭಾಗವಾಗಿ ಐಜಿಎಫ್ ಇಂಪ್ಯಾಕ್ಟ್ಗುರು.ಕಾ೦ನ ಕ್ರೌಡ್‌ಫಂಡಿ೦ಗ್ ಪ್ಲಾಟ್‌ ಫಾರಂನಲ್ಲಿ ನಿಧಿ ಸಂಗ್ರಹಿಸಲಿದೆ ಮತ್ತು ಅದನ್ನು ದುರ್ಬಲ ವರ್ಗದವರ ಕೆಟರಾಕ್ಟ್ಶಸ್ತ್ರಚಿಕಿತ್ಸೆಗಳನ್ನು ಪ್ರಾಯೋಜಿಸಲು ಬಳಸಲಾಗುತ್ತದೆ. ಈ ಶಸ್ತçಚಿಕಿತ್ಸೆಗಳನ್ನು ಪ್ರಿಸ್ಟಿನ್ ಕೇರ್‌ನ ತಜ್ಞ ನೇತ್ರ ವೈದ್ಯರು ನಿರ್ವಹಿಸುತ್ತಾರೆ. `ಸೇವ್ ದಿ ಸೈಟ್’ ಕೆಟರಾಕ್ಟ್ ಶಸ್ತçಚಿಕಿತ್ಸೆಗಾಗಿ ಕಾಯುತ್ತಿರುವ ಆದರೆ ಅದಕ್ಕೆ ಶಕ್ತಿಯಿಲ್ಲದ ೨ ಮಿಲಿಯನ್‌ಗೂ ಹೆಚ್ಚು ಮಂದಿಗೆ ದೃಷ್ಟಿ ನೀಡುವ ಉದ್ದೇಶ ಹೊಂದಿದೆ.
ಸುಮಾರು ೮ ಮಿಲಿಯನ್ ಅಂಧ ಜನರಿರುವ ಭಾರತವು ವಿಶ್ವದಲ್ಲಿ ಅತ್ಯಂತ ದೊಡ್ಡ ದೃಷ್ಟಿಹೀನ ಜನಸಂಖ್ಯೆಯ ತಾಣವಾಗಿದೆ. ಕೆಟರಾಕ್ಟ್ ಜೀವನ ಕುಂಠಿತಗೊಳಿಸುವ ಕಣ್ಣಿನ ಪ್ರಮುಖ ಸಮಸ್ಯೆ ಎಂದು ಪರಿಗಣಿಸಲಾಗಿದ್ದು ಭಾರತದಲ್ಲಿ ಶೇ.೫೦ರಿಂದ ೮೦ ರಷ್ಟು ಎರಡೂ ಕಡೆಯ ಅಂಧತ್ವ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಕೆಟರಾಕ್ಟ್ ತಪ್ಪಿಸಬಲ್ಲ ಅಂಧತ್ವದ ಅತ್ಯಂತ ಪ್ರಮುಖ ಕಾರಣ ಎಂದು ಕೂಡಾ ನಂಬಲಾಗಿದೆ. ನ್ಯಾಷನಲ್ ಸೆಂಟರ್ ಆಫ್ ಬಯೋ ಟೆಕ್ನಾಲಜಿ (ಎನ್‌ಸಿಬಿಐ)ಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ೩.೮ ಮಿಲಿಯನ್‌ಗೂ ಹೆಚ್ಚಿನ ಭಾರತೀಯರು ಕೆಟರಾಕ್ಟ್ಗೆ ಒಳಗಾಗುತ್ತಾರೆ.
ಸರ್ಕಾರವು ಕೋವಿಡ್-೧೯ ಸಾಂಕ್ರಾಮಿಕದಿ0ದ ಎರಡು ವರ್ಷಗಳಲ್ಲಿ ಉಂಟಾದ ೧೦ ಮಿಲಿಯನ್ ಕೆಟರಾಕ್ಟ್ಶಸ್ತ್ರಚಿಕಿತ್ಸೆ ಗಳನ್ನು ಪೂರೈಸಲು ಜೂನ್ ೧ರಿಂದ ವಿಶೇಷ ಅಭಿಯಾನ ಪ್ರಾರಂಭಿಸುತ್ತಿದೆ. ಇದನ್ನು ಸಾಧಿಸಲು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಮುಂದಿನ ಮೂರು ವರ್ಷಗಳಲ್ಲಿ ೬೧.೫೮ ಲಕ್ಷ ಶಸ್ತçಚಿಕಿತ್ಸೆಗಳ ಸೇರ್ಪಡೆ ಪ್ರಕಟಿಸಿದ್ದಾರೆ. ಈ ಕಾರ್ಯಕ್ರಮದ ಗುರಿ 2025ರ ವೇಳೆಗೆ ಅಂಧತ್ವದ ಪ್ರಮಾಣವನ್ನು ಶೇ.೦.೨೫ಕ್ಕೆ ಕಡಿಮೆ ಮಾಡುವುದಾಗಿದ್ದು 2010ರಲ್ಲಿ ಇದರ ಪ್ರಮಾಣ ಶೇ.೧.೪ರಷ್ಟಿತ್ತು. ಐಜಿಎಫ್ ಮತ್ತು ಪ್ರಿಸ್ಟಿನ್ ಕೇರ್ ನಡುವಿನ ಈ ಸಹಯೋಗವು ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡುವಲ್ಲಿ ಸರಿಯಾದ ದಿಕ್ಕಿನತ್ತ ಹೆಜ್ಜೆಯಾಗಿದೆ.
“ವಾರ್ಷಿಕ ಕೆಟರಾಕ್ಟ್ಗೆ ಒಳಗಾಗುವ ೩.೮ ಮಿಲಿಯನ್ ಭಾರತೀಯರಲ್ಲಿ ಶೇ.೮೦ರಷ್ಟು ಮಂದಿ ಶಾಶ್ವತ ಅಂಧತ್ವದಿ೦ದ ಬಳಲುತ್ತಾರೆ. ಪ್ರಿಸ್ಟಿನ್ ಕೇರ್‌ನೊಂದಿಗೆ ನಮ್ಮ ಸಹಯೋಗವು ದೇಶದ ಜನರಿಗೆ ಅವರ ದೃಷ್ಟಿಯನ್ನು ಮಂದರಹಿತವಾಗಿಸಲು ಮತ್ತು ಅವರ ಸುತ್ತಲಿನ ಸೌಂದರ್ಯವನ್ನು ಆನಂದಿಸಲು ನೆರವಾಗುವುದಾಗಿದೆ. ಇಂಪ್ಯಾಕ್ಟ್ ಗುರು ಫೌಂಡೇಷಷನ್ ಸದಾ ಆರೋಗ್ಯಸೇವೆ ಲಭ್ಯವಿರುವಂತೆ ಮಾಡುವುದರಲ್ಲಿ ನಂಬಿಕೆ ಇರಿಸಿದೆ. ಕೆಟರಾಕ್ಟ್ ಅಗತ್ಯವಿರುವಶಸ್ತ್ರಚಿಕಿತ್ಸೆಗಳಲ್ಲಿ ಒಂದಾ ಗಿದ್ದು ನಾವು ಗರಿಷ್ಠ ಪ್ರಮಾಣದ ವ್ಯಕ್ತಿಗಳಿಗೆ ಬೆಂಬಲಿಸುವ ಗುರಿ ಹೊಂದಿದ್ದೇವೆ” ಎಂದು ಇಂಪ್ಯಾಕ್ಟ್ ಗುರು ಫೌಂಡೇಷನ್‌ನ ಸಿಇಒ ಸಂದೀಪ್ ತಲ್ವಾರ್ ಹೇಳಿದರು.
ಪ್ರಿಸ್ಟಿನ್ ಕೇರ್‌ನ ಸಹ-ಸಂಸ್ಥಾಪಕ ಹರ್ಸಿಮರ್‌ಬಿರ್ ಸಿಂಗ್, “ಭಾರತದಲ್ಲಿ ಚಿಕಿತ್ಸೆಯ ಅಂತರ ಬಹಳ ದೊಡ್ಡದಿದೆ- ಕೆಲ ಗ್ರಾಮೀಣ ಪ್ರದೇಶಗಳಲ್ಲಿ 30000 ಜನರಿಗೆ ಕೇವಲ ಒಬ್ಬರೇ ವೈದ್ಯರಿದ್ದಾರೆ. ಟೈಯರ್-೨ ಮತ್ತು ಟೈಯರ್-೩ ನಗರಗಳಲ್ಲಿ ನಮ್ಮ ಸದೃಢ ಉಪಸ್ಥಿತಿಯಿಂದ ಭಾರತದ ಮಿಷನ್‌ಗೆ ನಮ್ಮ ಆರೋಗ್ಯಸೇವೆಯ ಅಡಿಯಲ್ಲಿ ಲಭ್ಯತೆ ಮತ್ತು ಉತ್ತಮ ಗುಣ ಮಟ್ಟದ ಆರೈಕೆ ನೀಡುವ ಗುರಿ ಹೊಂದಿದ್ದೇವೆ. ನಾವು 800+ ಆಸ್ಪತ್ರೆಗಳು ಮತ್ತು 200+ ಕ್ಲಿನಿಕ್‌ಗಳ ಜಾಲವನ್ನು ನಿರ್ಮಿಸಿದ್ದು ಅವು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತವೆ. ಇಂಪ್ಯಾಕ್ಟ್ ಗುರು ಫೌಂಡೇಷನ್ ಸಹಯೋಗದಲ್ಲಿ `ಸೇವ್ ದಿ ಸೈಟ್’ ಉಪಕ್ರಮ ದಿಂದ ನಾವು ಕೆಟರಾಕ್ಟ್ನಿಂದ ಬಳಲುತ್ತಿರುವ ದುರ್ಬಲ ವರ್ಗದ ಸಮುದಾಯದ ಅರ್ಹ ಫಲಾನುಭವಿಗಳಿಗೆಶಸ್ತ್ರಚಿಕಿತ್ಸೆ ಒದಗಿಸುವ ಗುರಿ ಹೊಂದಿದ್ದೇವೆ” ಎಂದರು.
ಈ ಕೆಳಕಂಡ ಷರತ್ತುಗಳ ಅನ್ವಯ ರೋಗಿಗಳು ಚಿಕಿತ್ಸೆ ಅರ್ಹರಾಗುತ್ತಾರೆ:• ಯಾವುದೇ ಬಿಪಿಎಲ್ ಕಾರ್ಡ್ದಾರರು ಈ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಬಹುದು• ಕುಟುಂಬದ ಮಾಸಿಕ ಆದಾಯ ರೂ.20000 ಮೀರಬಾರದು• ಈ ಕಾರ್ಯಕ್ರಮಕ್ಕೆ ನೋಂದಣಿಯಾಗಲು ರೋಗಿಗಳು ಯಾವುದೇ ಆರೋಗ್ಯ ಯೋಜನೆಗಳಲ್ಲಿ ನೋಂದಣಿಯಾಗಿರಬಾರರು• ಈ ಕಾರ್ಯಕ್ರಮಕ್ಕೆ ನೋಂದಣಿಯಾಗಲು ರೋಗಿಗಳು ಯಾವುದೇ ಆರೋಗ್ಯ ವಿಮೆ ಹೊಂದಿರಬಾರದು(ಸಮೂಹ ಅಥವಾ ವೈಯಕ್ತಿಕ)
ಕೆಟರಾಕ್ಟ್ ದೇಶದಲ್ಲಿ ದೃಷ್ಟಿ ನಷ್ಟದ ಪ್ರಮುಖ ಕಾರಣವಾಗಿದೆ; ಆದಾಗ್ಯೂ ಇದನ್ನು ಸರಳವಾದ ಚಿಕಿತ್ಸೆಯಿಂದ ಗುಣಪಡಿಸ ಬಹುದು ಶೇ.೯೮ಕ್ಕೂ ಹೆಚ್ಚಿನ ಪ್ರಮಾಣದ ಯಶಸ್ಸು ಸಾಧ್ಯ. ಪ್ರಿಸ್ಟಿನ್ ಕೇರ್ ಡೇಟಾ ಲ್ಯಾಬ್ ಜೂನ್‌ನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಮಾಹಿತಿಯ ಕೊರತೆ, ಚಿಕಿತ್ಸೆ ಮತ್ತು ಲಭ್ಯತೆ ಇಲ್ಲದೇ ಇರುವುದು ಭಾರತೀಯರಲ್ಲಿ ತಡವಾಗಲು ಪ್ರಮುಖ ಕಾರಣ ಗಳಾಗಿವೆ. ಪ್ರಿಸ್ಟಿನ್ ಕೇರ್ ಒಂದು ಲಕ್ಷಕ್ಕೂ ಹೆಚ್ಚು ಕೆಟರಾಕ್ಟ್ ರೋಗಿಗಳ ವಿಚಾರಣೆಗಳನ್ನು ಸ್ವೀಕರಿಸುತ್ತದೆ ಮತ್ತು ಇಲ್ಲಿಯವರೆಗೆ ೭೦೦೦+ ಕೆಟರಾಕ್ಟ್ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ.