ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವು
ಮುಂಬೈ:ಪುಣೆಯ ವಾಘೋಲಿಯಲ್ಲಿರುವ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ಶುಕ್ರವಾರ ಒಳ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೂವರು ಕಾರ್ಮಿಕರು ಸೊಲಾಸಿಯಾ ಹಂತ  ಹೌಸಿಂಗ್ ಸೊಸೈಟಿಯ ಒಳಚರಂಡಿ ಯೊಳಗೆ ಪ್ರವೇಶಿಸಿದರು. ಒಂದು ಗಂಟೆಯ ನಂತರ ಕಾರ್ಮಿಕರು ಸ್ಪಂದಿಸದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಮೃತ ಕಾರ್ಮಿಕರನ್ನು ನಿತಿನ್ ಪ್ರಭಾರ್ ಗೊಂಡ್ (45 ವರ್ಷ), ಗಣೇಶ್ ಭಲೇರಾವ್ (28 ವರ್ಷ) ಹಾಗೂ ಸತೀಶ್‌ಕುಮಾರ್ ಚೌಧರಿ ಎಂದು ಗುರುತಿಸಲಾಗಿದೆ.
ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಪಿಎಂಡಿಆರ್‌ಎ) ಅಗ್ನಿ ಶಾಮಕ ದಳದ ತಂಡವು ಸ್ಥಳಕ್ಕೆ ಧಾವಿಸಿದೆ.
ಕಾರ್ಮಿಕರ ಶವಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಪಿಎಂಆರ್ ಡಿಎ ಅಧಿಕಾರಿ ಹೇಳಿದ್ದಾರೆ.