ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ
ಒಡಿಶಾ:ಭಾರತವು ‘ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನ ಯಶಸ್ವಿಯಾಗಿ ಪರೀಕ್ಷಿಸಿದೆ.
ರಕ್ಷಣಾ ಅಧಿಕಾರಿಗಳು, ಮೂರನೇ ಬಾರಿಗೆ ‘ಅಗ್ನಿ ಪ್ರೈಮ್ ನ್ಯೂ ಜನರೇಷನ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬೆಳಿಗ್ಗೆ ಒಡಿಶಾದ ಕರಾವಳಿಯಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ’ ಎಂದು ತಿಳಿಸಿ ದ್ದಾರೆ.
ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ರಾಡಾರ್, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಗಳಂತಹ ಹಲವಾರು ಶ್ರೇಣಿಯ ಉಪಕರಣಗಳಿಂದ ಪಡೆದ ದತ್ತಾಂಶ ಬಳಸಿಕೊಂಡು ವ್ಯವಸ್ಥೆಯ ಕಾರ್ಯಕ್ಷಮತೆಯನ್ನ ಪ್ರಮಾಣೀಕರಿಸ ಲಾಗಿದೆ ಎಂದರು.