 : ಒಂದು ರೂಪಾಯಿಯಿಂದ ಸರ್ಕಾರಿ ಕೆಲಸ ಕಳೆದುಕೊಂಡ ನೌಕರ!
ಲಖನೌ:ಒಂದು ರೂಪಾಯಿ ಎಂದರೆ ಬಹುತೇಕ ಜನ  ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಒಂದು ರೂಪಾಯಿಯಲ್ಲಿ ಏನಾಗಬಹುದು ಎಂದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಒಂದು ರೂಪಾಯಿಯಿಂದ ಕೆಲಸವನ್ನೇ ಕಳೆದುಕೊಂಡಿದ್ದಾನೆ. ಇದರ ವಿಡಿಯೋ ( ) ಈಗ ಸಾಮಾಜಿಕ ಜಾಲತಾಣದಲ್ಲಿ( ) ವೈರಲ್ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ರೋಗಿಯಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದ ಕಾರಣಕ್ಕೆ ಆತನನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಪೂರ್ವ ಭಾಗದ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಗುತ್ತಿಗೆ ನೌಕರನನ್ನು ರೋಗಿಯಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದಿರುವುದಕ್ಕೆ ವಜಾ ಮಾಡಲಾಗಿದೆ. ಬಿಜೆಪಿ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಆಸ್ಪತ್ರೆ ಅಧಿಕಾರಿಗಳೇ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ದೂರು ಕೇಳಿ ಬಂದಿದ್ದರಿಂದ ಜಗದೌರ್ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಬಿಜೆಪಿ ಶಾಸಕ ಪ್ರೇಮ್ ಸಾಗರ್ ಪಟೇಲ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುತ್ತಿದ್ದ ಶಾಸಕರು ತಪಾಸಣೆ ಮಾಡುವಾಗ 1 ರೂಪಾಯಿ ನಿಗದಿ ಶುಲ್ಕದ ಬದಲಿಗೆ ರೋಗಿಗಳಿಂದ 2 ರೂಪಾಯಿ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಆಕ್ರೋಶಗೊಂಡ ಶಾಸಕರು ಸಾರ್ವಜನಿಕರ ಮುಂದೆಯೇ ಆಸ್ಪತ್ರೆಯ ಗುತ್ತಿಗೆ ನೌಕರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮಾತ್ರವಲ್ಲದೆ ಆತನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.
देश को ऐसे नेताओं की सख्त जरूरत है.! 🙏 🫡उत्तर प्रदेश के महाराजगंज ज़िले के सरकारी अस्पताल में  विधायक प्रेम सागर पटेल के औचक निरीक्षण में फार्मासिस्ट द्वारा पर्ची के लिए 1 की जगह 2 रुपए लिया जा रहा था। फिर क्या विधायक जी का गुस्सा देखिये, अफ़सरों को जमकर खरी खोटी सुनाई.!../KKXOEMBP6N
ಇದೇ ಸಂದರ್ಭದಲ್ಲಿ ಹೆರಿಗೆ ವೇಳೆ ವೈದ್ಯರು ಸಿಗದೇ ಇರುವುದು, ರಾತ್ರಿ ಪಾಳಿ ವೈದ್ಯರು ಗೈರು ಹಾಜರಾಗುವುದು, ತುರ್ತು ಚಿಕಿತ್ಸೆ ನೀಡದೇ ಇರುವುದು, ಖಾಸಗಿ ಮೆಡಿಕಲ್​ಗಳಿಗೆ ಔಷಧ ಬರೆದುಕೊಡುವುದು ಸೇರಿದಂತೆ ಹಲವು ದೂರುಗಳನ್ನು ಶಾಸಕರ ಮುಂದೆ ಹೇಳಿಕೊಂಡರು. ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ಕರೆಸಿದ ಶಾಸಕರು ಮತ್ತೆ ಈ ದೂರುಗಳು ಬರಬಾರದು ಎಂದು ಎಚ್ಚರಿಕೆಯನ್ನು ನೀಡಿದರು.
 : ಕಿರಿಯ ವಯಸ್ಸಿನ ಯುವತಿಯೊಂದಿಗೆ ಮುದುಕನ ಮದುವೆ! ಕಾರಣ ಇನ್‌ಕಮ್‌ ಮತ್ತು ದಿನ್‌ಕಮ್‌ ಅಂತೆ!
