ಭಾರತದ ’ಉಕ್ಕಿನ ಮನುಷ್ಯ’ ಜಮ್ಶೆಡ್ ಜೆ.ಇರಾನಿ ನಿಧನ
ಟಾಟಾ ಸ್ಟೀಲ್​ ಕಂಪೆನಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದ ಜಮ್ಶೆಡ್​ ಇರಾನಿ 43 ವರ್ಷಗಳ ಕಾಲ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದರು. 1936ರಲ್ಲಿ ಜೂನ್​ 2ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಗೆ ಜನಿಸಿದ ಇವರು ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
1960 ರಲ್ಲಿ ಮೆಟಲರ್ಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು ಹಾಗೂ 1963 ರಲ್ಲಿ ಲೋಹಶಾಸ್ತ್ರದಲ್ಲಿ ಪಿಹೆಚ್ಡಿ ಪಡೆದರು.