ನರಬಲಿ ಪ್ರಕರಣ: ಆರೋಪಿಗಳಿಗೆ ಜಾಮೀನು ನಿರಾಕರಣೆ
ತಿರುವನಂತಪುರ:ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದ್ದ ನರಬಲಿ ಪ್ರಕರಣದ ಆರೋಪಿಗಳಾದ ಲೈಲಾ ಭಗವಾಲ್ ಸಿಂಗ್ ಗೆಕೇರಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಪ್ರಕರಣ ಗಂಭೀರ ವಾಗಿರುವ ಕಾರಣ ಜಾಮೀನು ನಿರಾಕರಿಸಲಾಗಿದೆ.
ಇಬ್ಬರು ಮಹಿಳೆಯರ ನರಬಲಿ ಪ್ರಕರಣ ಸಂಬಂಧ ಲೈಲಾ ಭಗವಾಲ್ ಸಿಂಗ್ ಸೇರಿದಂತೆ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳಾದಲ್ಲಿ ಇಬ್ಬರು ಮಹಿಳೆಯರ ದೇಹಗಳು ಪತ್ತೆಯಾದ ಬಳಿಕ ರಾಜ್ಯದಲ್ಲಿ ನರಬಲಿ ಪ್ರಕರಣ ಬೆಳಕಿಗೆ ಬಂದಿತ್ತು. ಇಬ್ಬರು ಮಹಿಳೆಯರ ನಾಪತ್ತೆಗೆ ಸಂಬಂಧಿಸಿದ ತನಿಖೆಯು ಪೊಲೀಸರನ್ನು ನರಬಲಿ ವ್ಯೂಹದೆಡೆಗೆ ಕೊಂಡೊ ಯ್ದಿತ್ತು.
ಎರ್ನಾಕುಲಂನಲ್ಲಿ ಲಾಟರಿ ಟಿಕೆಟ್‌ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ಇದೇ ಜೂನ್‌ ಮತ್ತು ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ಅವರಿಬ್ಬರ ಕುಟುಂಬವೂ ಕೇರಳದಲ್ಲಿದೆ. ಮಹಿಳೆಯ ಕೊಲೆಯನ್ನು ನರಬಲಿಯ ಭಾಗವಾಗಿ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.
ಅಪಹರಣ ಮತ್ತು ನರಬಲಿಗೆ ಸಂಬಂಧಿಸಿದಂತೆ ಪೊಲೀಸರು ರಶೀದ್‌ ಎಂಬಾತನನ್ನು ಬಂಧಿಸಿದ್ದರು. ನರಬಲಿಯಲ್ಲಿ ಭಾಗಿ ಯಾದ ಆರೋಪಕ್ಕೆ ಸಂಬಂಧಿಸಿದಂತೆ ದಂಪತಿಯಾದ ಭಗವಾಲ್‌ ಸಿಂಗ್‌ ಮತ್ತು ಲೈಲಾ ಅವರನ್ನು ವಶಕ್ಕೆ ಪಡೆಯಲಾಗಿತ್ತು.