ಶಿವಸೇನಾ ನಾಯಕ ಸುಧೀರ್ ಸೂರಿ ಮೇಲೆ ಗುಂಡಿನ ದಾಳಿ
ಅಮೃತಸರ:ಪಂಜಾಬಿನ ಅಮೃತಸರದಲ್ಲಿ ಶಿವಸೇನಾ ನಾಯಕ ಸುಧೀರ್ ಸೂರಿ ಅವರ ಮೇಲೆ ಹಾಡಹಗಲೇ ಗುಂಡು ಹಾರಿಸಲಾಗಿದೆ.
ಶಿವಸೇನಾ ನಾಯಕರು (ಉದ್ಧವ್ ಠಾಕ್ರೆ ಬಣ) ಪ್ರತಿಭಟನೆ ನಡೆಸುತ್ತಿದ್ದಾಗ ದೇವಾಲಯದ ಹೊರಗೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದ್ದು, ಈ ವೇಳೆಯಲ್ಲಿ ಜನಸಮೂಹದಿಂದ ಸೂರಿಯನ್ನು ಗುಂಡಿಕ್ಕಲಾಗಿದೆ ಎನ್ನಲಾಗಿದೆ.
ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸೂರಿಯ ಮೇಲೆ ಗುಂಡು ಹಾರಿಸಲು ಮೂರು ಪಿಸ್ತೂಲುಗಳನ್ನು ಬಳಸಲಾಗಿದೆ ಎನ್ನಲಾಗಿದೆ.
ಅಮೃತಸರದ ಮಜಿತಾ ರಸ್ತೆಯಲ್ಲಿರುವ ಗೋಪಾಲ್ ಮಂದಿರದ ಹೊರಗೆ ಈ ಘಟನೆ ನಡೆದಿದ್ದು, ಅದರಲ್ಲಿ ಸೂರಿಗೆ ಎರಡು ಗುಂಡುಗಳು ತಗುಲಿವೆ.
ದೇವಾಲಯದ ಹೊರಗೆ ಕಸದಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿರುವುದನ್ನು ಪ್ರತಿಭ ಟಿಸಲು ಶಿವಸೇನಾ ನಾಯಕರು ಗೋಪಾಲ್ ದೇವಾಲಯದ ಹೊರಗೆ ಧರಣಿ ಕುಳಿತಿದ್ದರು ಎನ್ನಲಾಗಿದೆ.