ಯುಜಿಸಿ- ನೆಟ್ ಫಲಿತಾಂಶ ಇಂದು ಪ್ರಕಟ
ನವದೆಹಲಿ:ಯುಜಿಸಿ- ನೆಟ್ ಫಲಿತಾಂಶ ಶನಿವಾರ ಪ್ರಕಟವಾಗಲಿದೆ. ನೆಟ್ ಫಲಿತಾಂಶ ಬಿಡುಗಡೆಯಾಗಲಿದ್ದು, ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
‘ಯುಜಿಸಿ- ನೆಟ್ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನವೆಂಬರ್ 5ರಂದು (ಶನಿವಾರ) ಪ್ರಕಟಿಸಲಿದೆ. ಫಲಿತಾಂಶ ಗಳು  ವೆಬ್‌ಸೈಟ್ ://..#- ನಲ್ಲಿ ಲಭ್ಯವಿರುತ್ತವೆ ಎಂದು ತಿಳಿಸಿದ್ದಾರೆ.
ಜುಲೈ 9ರಿಂದ 12ರವರೆಗೆ ಮೊದಲ ಹಂತದ ನೆಟ್ ಪರೀಕ್ಷೆಯ ನಡೆದಿತ್ತು. 2ನೇ ಹಂತದ ಪರೀಕ್ಷೆ ಸೆಪ್ಟೆಂಬರ್ 20ರಿಂದ 22ರವರೆಗೆ ನಡೆದಿತ್ತು.
  2022 ಪರೀಕ್ಷೆಯ 3ನೇ ಹಂತ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 1ರವರೆಗೆ ನಡೆದಿತ್ತು. 4ನೇ ಹಂತ ಅಕ್ಟೋಬರ್ 8, 10, 11, 12, 13, ಮತ್ತು 14ರಂದು ನಡೆದಿತ್ತು.