ಕರ್ಮಯೋಗಿ ಪ್ರಾರಂಭ್ ಆನ್‌ಲೈನ್ ಕೋರ್ಸ್‌ಗೆ ಪಿಎಂ ಚಾಲನೆ
ನವದೆಹಲಿ:ರೋಜಗಾರ್ ಮೇಳದಲ್ಲಿ ನೇಮಕವಾದ ಎಲ್ಲ ಉದ್ಯೋಗಿ ಗಳಿಗೆ ಕರ್ಮಯೋಗಿ ಪ್ರಾರಂಭ್ ಮಾಡ್ಯೂಲ್ ಆನ್ಲೈನ್ ಒರಿಯೆಂಟೇಷನ್ ಕೋರ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು.
ರೋಜಗಾರ್ ಮೇಳವು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆಯಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಹೊಸದಾಗಿ ನೇಮಕಗೊಂಡಿರುವ ಉದ್ಯೋಗಿಗಳಿಗೆ ಕರ್ಮಯೋಗಿ ಪ್ರಾರಂಭವು ಪರಿಚಯಾತ್ಮಕ ಆನ್‌ಲೈನ್ ಕೋರ್ಸ್ ಆಗಿದೆ.
ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರದ ರೋಜಗಾರ್ ಮೇಳದ ಭಾಗವಾಗಿ ನೇಮಕವಾಗಿ ಒಟ್ಟು 71 ಸಾವಿರ ಜನರಿಗೆ ನೇಮಕಾತಿ ಪತ್ರಗಳ ವಿತರಣೆಗೆ ಚಾಲನೆ ನೀಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು.