ಆರ್ಥಿಕ ಹಿಂಜರಿತ: ಗೂಗಲ್’ನಲ್ಲಿ 10 ಸಾವಿರ ಉದ್ಯೋಗಿಗಳ ವಜಾ.!
ನವದೆಹಲಿ:ವಿಶ್ವದಲ್ಲಿ ಆರ್ಥಿಕ ಹಿಂಜರಿತ ಈಗಾಗಲೇ ಅಮೆಜಾನ್, ಮೆಟಾ, ಸಿಸ್ಕೋ, ಟ್ವಿಟರ್ ಮೊದಲಾದ ಕಂಪನಿಗಳು ಸಾವಿರಾರು ಉದ್ಯೋಗಿ ಗಳನ್ನು ಕೆಲಸದಿಂದ ತೆಗೆದಿವೆ.
ಇದೀಗ ಗೂಗಲ್ ಸಹ ಇದೇ ಹಾದಿ ಹಿಡಿಯಲು ಮುಂದಾಗಿದ್ದು, 10000 ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ತಿಳಿದು ಬಂದಿದೆ. ಪೂರ್ವ ಸಿದ್ಧತೆಯಾಗಿ ಮ್ಯಾನೇಜರ್ ಗಳಿಂದ ಉದ್ಯೋಗಿಗಳ ಕಾರ್ಯ ಕ್ಷಮತೆ ಕುರಿತಂತೆ ವರದಿ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮ್ಯಾನೇಜರ್ಗಳು ತಮ್ಮ ಕೆಳಗೆ ಕೆಲಸ ಮಾಡುವ ಉದ್ಯೋಗಿಗಳ ಕಾರ್ಯಕ್ಷಮತೆ ಕುರಿತು ಅಂಕಗಳನ್ನು ನೀಡಲಿದ್ದು, ಇದರ ಆಧಾರದ ಮೇಲೆ ವೇತನ, ಬೋನಸ್ ಮೊದಲಾದವು ನಿರ್ಧಾರವಾಗುತ್ತದೆ. ಉದ್ಯೋಗಿಯ ಕಾರ್ಯಕ್ಷಮತೆ ಕಳಪೆ ಎಂದು ಕಂಡು ಬಂದರೆ ಆತನನ್ನು ವಜಾಗೊಳಿಸ ಲಾಗುತ್ತದೆ.
ಕೆಲವೇ ವಾರಗಳ ಅವಧಿಯಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು, ಇದು ಭಾರತೀಯ ಉದ್ಯೋಗಿಗಳ ಮೇಲು ಪರಿಣಾಮ ಬೀರಿದೆ.