ಮೂರು ಬಸ್‌ಗಳ ಸರಣಿ ಡಿಕ್ಕಿ: 37 ಜನರ ಸಾವು
ಮೈದುಗುರಿ:ಈಶಾನ್ಯ ನಗರ ಮೈದುಗುರಿ ಹೊರಗೆ ಮೂರು ಬಸ್‌ಗಳು ಸರಣಿ ಡಿಕ್ಕಿ ಹೊಡೆದು ಕನಿಷ್ಠ 37 ಜನರು ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಎರಡು ವಾಣಿಜ್ಯ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿವೆ. ಈ ವೇಳೆ ಮತ್ತೊಂದು ಬಸ್‌ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 37 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಬೋರ್ನೊ ರಾಜ್ಯದ ರಾಜಧಾನಿ ಮೈದುಗುರಿಯಿಂದ 35 ಕಿಮೀ (20 ಮೈಲುಗಳು) ಜಕಾನಾ ಗ್ರಾಮದ ಬಳಿ ಮಾರಣಾಂತಿಕ ಅಪಘಾತ ಸಂಭವಿಸಿದೆ. ಬಸ್ ಟೈರ್ ಒಡೆದು ಮುಂದೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.