ಸಂವಿಧಾನ ದಿನ ಆಚರಣೆ ಇಂದು: ಪ್ರಧಾನಿ ಮೋದಿ, ನ್ಯಾ.ಚಂದ್ರಚೂಡ್ ಭಾಗಿ
ನವದೆಹಲಿ:ಭಾರತದಲ್ಲಿ ಇಂದು ಸಂವಿಧಾನ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂ ಕೋರ್ಟ್‌ನಲ್ಲಿ ಸಂವಿಧಾನ ದಿನಾಚರಣೆ ಯಲ್ಲಿ ಪಾಲ್ಗೊಳ್ಳಲಿದ್ದು, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕೂಡ ಉಪಸ್ಥಿತ ರಿರುತ್ತಾರೆ.
1949ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ 2015 ರಿಂದ ನವೆಂಬರ್ 26 ಅನ್ನು ಸಂವಿಧಾನ ದಿನವೆಂದು ಆಚರಣೆ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿಯವರು ಇ-ಕೋರ್ಟ್ ಯೋಜನೆಯಡಿಯಲ್ಲಿ ವಿವಿಧ ಹೊಸ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯು ನ್ಯಾಯಾಲಯಗಳ  ಸಕ್ರಿಯಗೊಳಿಸುವಿಕೆಯ ಮೂಲಕ ದಾವೆದಾರರು, ವಕೀಲರು ಮತ್ತು ನ್ಯಾಯಾಂಗಕ್ಕೆ ಸೇವೆಗಳನ್ನು ಒದಗಿಸುವ ಪ್ರಯತ್ನವಾಗಿದೆ.
ವರ್ಚುವಲ್ ಜಸ್ಟೀಸ್ ಕ್ಲಾಕ್,  ಮೊಬೈಲ್ ಅಪ್ಲಿಕೇಶನ್ 2.0, ಡಿಜಿಟಲ್ ಕೋರ್ಟ್ ಮತ್ತು S3WaaS ವೆಬ್‌ಸೈಟ್‌ಗಳ ಅನಾ ವರಣ ಮಾಡಲಿದ್ದಾರೆ ಎಂದು ಕೋರ್ಟ್ ಮುಖ್ಯ ಕಚೇರಿ ಹೇಳಿದೆ.
ಇಂದು, ಸಂವಿಧಾನದ ದಿನದಂದು, ನಮಗೆ ನಮ್ಮ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿಗಳಿಗೆ ನಾವು ಗೌರವ ಸಲ್ಲಿಸುತ್ತೇವೆ ಮತ್ತು ನಮ್ಮ ರಾಷ್ಟ್ರಕ್ಕಾಗಿ ಅವರ ಚಿಂತನೆಯನ್ನು ಪೂರೈಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಹೇಳಿದರು.