 16 : ಹೊಸ ಐಫೋನ್‌ 16 ಇಂದಿನಿಂದ ಲಭ್ಯ, ದೇಶಾದ್ಯಂತ ಐಫೋನ್‌ ಅಂಗಡಿಗಳ ಮುಂದೆ ಗ್ರಾಹಕರ ಕ್ಯೂ!
ಮುಂಬಯಿ: ಪ್ರತಿಷ್ಠಿತ ಗ್ಯಾಜೆಟ್‌ ಕಂಪನಿಯಾದ ಆ್ಯಪಲ್ (), ತನ್ನ ನೂತನ ಐಫೋನ್‌ 16 ( 16 ) ಆವೃತ್ತಿಯನ್ನು ಹೊರತಂದಿದೆ. ದೇಶಾದ್ಯಂತ ಇಂದಿನಿಂದ ಅದು ಲಭ್ಯವಾಗುತ್ತಿದ್ದು, ಆ್ಯಪಲ್ ಮಳಿಗೆಗಳ ( ) ಮುಂದೆ ಬೆಳಗ್ಗಿನಿಂದಲೇ ಐಫೋನ್‌ ಪ್ರಿಯರು ಕ್ಯೂ ನಿಂತಿದ್ದಾರೆ.
ಭಾರತದಲ್ಲಿ ಐಫೋನ್ ಕುರಿತು ಸಾಕಷ್ಟು ಕ್ರೇಜ್‌ ಇದೆ. ಹೊಸದಾಗಿ ಬಿಡುಗಡೆಯಾದ ಐಫೋನ್ 16 ( 16) ಸೀರೀಸ್​ನ ಫೋನ್​ಗಳು ಭಾರತೀಯ ಮಾರುಕಟ್ಟೆಯಲ್ಲಿ ಇಂದಿನಿಂದ ಲಭ್ಯವಿದ್ದು, ನೂತನ ಫೋನ್​ಗಳನ್ನು ಮೊದಲಿಗೆ ಖರೀದಿಸಬೇಕೆಂದು ಮುಗಿಬಿದ್ದಿರುವ ಗ್ರಾಹಕರು ಮುಂಬಯಿಯ ಆ್ಯಪಲ್ ಸ್ಟೋರ್‌ನತ್ತ ನುಗ್ಗುತ್ತಿದ್ದಾರೆ. ಮಳಿಗೆ ಮುಂದೆ ಭಾರಿ ಜನ ಸೇರಿರುವ ವಿಡಿಯೋ ಹರಿದಾಡುತ್ತಿದೆ.
ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈನ  ಯಲ್ಲಿನ ಆಪಲ್ ಸ್ಟೋರ್‌ನ ಹೊರಗೆ ಉದ್ದನೆಯ ಸರತಿ ಸಾಲುಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನ್ನ ಐಫೋನ್ ಸರಣಿ ಮತ್ತು ಇತರ ಉತ್ಪನ್ನಗಳ ವಾರ್ಷಿಕ ಬಿಡುಗಡೆಗೆ ಹೆಸರುವಾಸಿಯಾದ ಆ್ಯಪಲ್, ಭಾರತ, ದಕ್ಷಿಣ ಕೊರಿಯಾ, ಚೀನಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಸುಮಾರು 60 ದೇಶಗಳಲ್ಲಿ ಐಫೋನ್ 16 ಸರಣಿಯನ್ನು ಹೊರತಂದಿದೆ.
 |              16      .(      –://./n147TvqRQz)../rA61tyivaY
ಐಫೋನ್ 16 ಅನ್ನು ಖರೀದಿಸಲು ಗುಜರಾತ್‌ನ ಸೂರತ್‌ನಿಂದ ಮುಂಬಯಿಯ ಆಪಲ್ ಸ್ಟೋರ್‌ಗೆ ಬೆಳ್ಳಂಬೆಳಿಗ್ಗೆಯೇ ಗ್ರಾಹಕರೊಬ್ಬರು ಧಾವಿಸಿ ಬಂದಿದ್ದಾರೆ. ‘ನಾನು ಬೆಳಿಗ್ಗೆ 6 ಗಂಟೆಗೆ ಬಂದಿದ್ದೇನೆ. ಐಪೋನ್​ 16 ಪ್ರೋ ಮ್ಯಾಕ್ಸ್​ ಅನ್ನು ಖರೀದಿಸಿದೆ.  18 ಅನ್ನು ಇಷ್ಟಪಟ್ಟಿದ್ದೇನೆ. ಅದರ ಜೂಮ್ ಕ್ಯಾಮೆರಾ ಗುಣಮಟ್ಟ ಉತ್ತಮವಾಗಿದೆ’ ಎಂದು ಹೇಳಿದ್ದಾರೆ ಸೂರತ್‌ನ ಅಕ್ಷಯ್.
ಇದೇ ರೀತಿಯ ದೃಶ್ಯಗಳು ದೆಹಲಿಯ ಸಾಕೇತ್ ಆ್ಯಪಲ್ ಸ್ಟೋರ್‌ನಲ್ಲೂ ಕಂಡುಬಂದಿವೆ. ಜನ ಬಿಡುಗಡೆಯಾಗಿರುವ ಐಫೋನ್ ಹೊಸ ಸೀರೀಸ್ ಖರೀದಿಸಲು ಅಂಗಡಿಯಲ್ಲಿ ನೆರೆದಿದ್ದಾರೆ. ಅಂಗಡಿ ತೆರೆಯುವ ಮೊದಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಐಫೋನ್ 16 ಸೀರೀಸ್ ಬೆಲೆ ಎಷ್ಟು?
ಆ್ಯಪಲ್​ನ ಬಹು ನಿರೀಕ್ಷಿತ ಐಫೋನ್ 16 ಸೀರೀಸ್- ಐಪೋನ್​ 16, ಐಪೋನ್​ 16 ಪ್ಲಸ್​, ಐಪೋನ್​ 16 ಪ್ರೋ ಮತ್ತು ಐಪೋನ್​ 16 ಪ್ರೋ ಮ್ಯಾಕ್ಸ್​ ಫೋನ್​ಗಳು ಸೆಪ್ಟೆಂಬರ್ 20ರಿಂದ ಖರೀದಿಗೆ ಲಭ್ಯವಿವೆ. ಆಪಲ್ ತನ್ನ ಗ್ರಾಹಕರನ್ನು ಅಚ್ಚರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಐಫೋನ್ 16 ಸರಣಿಯ ಮೂಲ ಮಾದರಿಯ ಬೆಲೆ 79,900 ರೂ. ಐಫೋನ್ 16 ಪ್ರೋ ಕಳೆದ ವರ್ಷದ ಐಫೋನ್ 15 ಪ್ರೋಗಿಂತ 15,000 ಕಡಿಮೆ ಬೆಲೆಯನ್ನು ಹೊಂದಿದೆ. ಇದರ ಬೆಲೆ 1,19,900 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.
ಭಾರತದಲ್ಲಿ ( 16   ) ಐಫೋನ್ 16 ಬೆಲೆ 79,900 ರೂ. ಮತ್ತು ಐಫೋನ್ 16 ಪ್ಲಸ್ 89,900 ರೂ.ಗಳಲ್ಲಿ ಲಭ್ಯವಿರುತ್ತದೆ. ಮತ್ತೊಂದೆಡೆ, ಐಫೋನ್ 16 ಪ್ರೋ ಭಾರತದಲ್ಲಿ 1,19,900 ರೂಪಾಯಿಗಳ ಆರಂಭಿಕ ಬೆಲೆಯೊಂದಿಗೆ ಸಿಗುತ್ತದೆ. ಅತ್ಯಂತ ಪ್ರೀಮಿಯಂ, ಐಫೋನ್ 16 ಪ್ರೋ ಮ್ಯಾಕ್ಸ್, ಭಾರತೀಯ ಮಾರುಕಟ್ಟೆಯಲ್ಲಿ ನಿಮಗೆ 1,44,900 ರೂಪಾಯಿಗೆ ದೊರಕಲಿದೆ.
ಇದನ್ನೂ ಓದಿ: 18 : ಐಒಎಸ್‌ 18 ಹೊಸ ಫೀಚರ್‌ಗಳು ಇಲ್ಲಿವೆ ನೋಡಿ! ಐಪೋನ್‌ ಬಳಕೆದಾರರಿಗೆ ಹಬ್ಬ!