ಆರು ಮದುವೆಯಾಗಿ ಸಿಕ್ಕಿಬಿದ್ದ ಭೂಪ !
ಛೋಟುವಿನ ಮೊದಲ ಎರಡು ಮದುವೆಗಳನ್ನು ಆತನ ಕುಟುಂಬಸ್ಥರು ಮಾಡಿದ್ದರು. ಚೆಂಬೇರಿಯಾ ಮತ್ತು ಸುಂದರಕಾಂಡ್ ನ ಮಹಿಳೆಯರನ್ನು ವಿವಾಹವಾಗಿದ್ದ. ನಂತರ 2011 ರಲ್ಲಿ ತನ್ನ ಆಸೆಗೆ ಅನುಗುಣವಾಗಿ ಮತ್ತೊಬ್ಬ ಮಹಿಳೆಯನ್ನು ಛೋಟು ವಿವಾಹ ವಾಗಿದ್ದಾಗಿ ತಿಳಿಸಿದ್ದಾನೆ. ಕಲಾವತಿ ರಾಂಚಿಯವಳಾಗಿದ್ದು, ಇಬ್ಬರಿಗೂ 4 ಮಕ್ಕಳಿ ದ್ದಾರೆ.
2018 ರಲ್ಲಿ ಮಂಜು ದೇವಿಯನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕಲಾವತಿ ತನ್ನ ಪತಿ ಎರಡನೇ ಮದುವೆ ಯಾಗಿದ್ದಾನೆ ಎಂದು ತಿಳಿದು ಬಂದಿದೆ. ಛೋಟು ತನ್ನ ಅನಾರೋಗ್ಯದ ಮಗುವಿಗೆ ಔಷಧಿ ಖರೀದಿಸಲು ಮನೆಯಿಂದ ಹೋಗಿದ್ದ ವನು ಹಿಂತಿರುಗಲಿಲ್ಲ ಎಂದು ಆಕೆಯ ತಾಯಿ ಕಾವಿಯಾ ದೇವಿ ಹೇಳಿದ್ದಾರೆ.
ತನ್ನ ನಾಲ್ಕನೇ ಪತ್ನಿ ಸಂಗ್ರಾಮ್ಪುರಕ್ಕೆ ಸೇರಿದವರೆಂದೂ, ಮುಂದಿನ ಇಬ್ಬರು ಕ್ರಮವಾಗಿ ದೆಹಲಿ ಮತ್ತು ದಿಯೋಘರ್ನವರು ಎಂದು ಬಹಿರಂಗಪಡಿಸಿದರು.