ಆಗರ್ ಮಾಲ್ವಾದಿಂದ ಭಾರತ್ ಜೋಡೋ ಯಾತ್ರೆ ಆರಂಭ
ಅಮ್ಲಾ ಗ್ರಾಮದಲ್ಲಿ ಯಾತ್ರೆಗೆ ವಿರಾಮ ನೀಡಲಾಗಿದ್ದು, ಮಧ್ಯಾಹ್ನ ಸುಸ್ನೆರ್ ಟೌನ್ ನ ಜೈನ್ ಮಂದಿರದಿಂದ ಆರಂಭವಾಗ ಲಿದ್ದು, ಆಗರ್ ಮಾಲ್ವಾದ ಮಂಗೇಶ್ ಪುರ್ ಚೌರಾ ತಲುಪಲಿದೆ. ಲಾಲಾ ಖೇಡಿ ಗ್ರಾಮದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡವರು ರಾತ್ರಿ ತಂಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಯಾತ್ರೆ ಡಿ.4 ರಂದು ರಾಜಸ್ಥಾನ ತಲುಪಲಿದೆ.