ಪ್ರತ್ಯೇಕತಾವಾದಿ ನಯೀಮ್‌ ಖಾನ್‌ಗೆ ಜಾಮೀನು ನಕಾರ
ನವದೆಹಲಿ:‘ಭಯೋತ್ಪಾದನೆಗೆ ಹಣಕಾಸು ನೆರವು’ ಪ್ರಕರಣದ ಆರೋಪಿ, ಪ್ರತ್ಯೇಕತಾವಾದಿ ನಾಯಕ ನಯೀಮ್‌ ಅಹ್ಮದ್ಖಾನ್‌ಗೆ ಜಾಮೀನು ನೀಡಲು ದೆಹಲಿಯ ಕೋರ್ಟ್‌ ನಿರಾಕರಿಸಿದೆ.
ಹುರಿಯತ್‌ ಕಾನ್ಫರೆನ್ಸ್‌ ನಾಯಕ, ಆರೋಪಿ ನಯೀಮ್‌ ವಿರುದ್ಧ ಸಾಕ್ಷ್ಯಗಳು ಇವೆ ಎಂದು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾ ಧೀಶ ಶೈಲೇಂದ್ರ ಮಲಿಕ್‌ ಹೇಳಿದ್ದಾರೆ.
ಉಗ್ರ ಕೃತ್ಯಗಳಿಗೆ ಹಣಕಾಸು ನೆರವು ನೀಡಿದ್ದು, ಐಸಿಸ್‌ ಪರ ರ‍್ಯಾಲಿ ಮುನ್ನಡೆಸಿದ್ದು ಮತ್ತು ಉಗ್ರರನ್ನು ಹತ್ಯೆಗೈದ ಸ್ಥಳಗಳಿಗೆ ಭೇಟಿ ನೀಡಿರುವ ಕೃತ್ಯಗಳಲ್ಲಿ ನಯೀಮ್‌ ಭಾಗಿ ಆಗಿರು ವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆರೋಪ ಹೊರಿಸುವ ವೇಳೆಯೂ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ. ಆರೋಪ ಹೊರಿಸಲು ಈ ಎಲ್ಲಾ ಸಾಕ್ಷ್ಯಗಳು ಸಮರ್ಥನೀಯವಾಗಿದ್ದರೆ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ನಯೀಮ್‌ ಅವರನ್ನು 2017ರ ಜುಲೈ 24ರಂದು ಬಂಧಿಸಲಾಗಿತ್ತು. ಲಷ್ಕರ್‌-ಎ-ತಯಬಾ ಮುಖ್ಯಸ್ಥ ಮತ್ತು 2008ರಲ್ಲಿ ನಡೆದಿದ್ದ ಮುಂಬೈ ದಾಳಿಯ ರೂವಾರಿ ಹಫೀಸ್‌ ಸಯೀದ್‌ ಈ ಮೊಕದ್ದಮೆಯಲ್ಲಿ ಭಾಗಿಯಾಗಿದ್ದನು.