ಸೋಪೋರ್‌’ನಲ್ಲಿ 3 ಕೆಜಿ ಐಇಡಿ ಪತ್ತೆ
ಕಾಶ್ಮೀರ :ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನ ತುಲಿಬಲ್ ಪ್ರದೇಶದಲ್ಲಿ ಸುಮಾರು 2 ರಿಂದ 3 ಕಿಲೋ ಗ್ರಾಂಗಳಷ್ಟು ಐಇಡಿ ಪತ್ತೆಯಾಗಿದ್ದವು. ಸುರಕ್ಷಿತ ರೀತಿಯಲ್ಲಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ನವೆಂಬರ್ 25 ರಂದು, ಶೋಪಿಯಾನ್ ಪೊಲೀಸ್ ಮತ್ತು ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆಯಲ್ಲಿ ಶೋಪಿಯಾನ್‌ನ ಇಮಾಮಸಾಹಿಬ್‌ನಲ್ಲಿ ಕುಕ್ಕರ್‌ನಲ್ಲಿ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿತ್ತು.