 ಸಿಮೆಂಟ್ – ದಾಲ್ಮಿಯಾ ಗ್ರೂಪ್‌ ನಡುವೆ 5,666 ಕೋಟಿ ರೂ. ಒಪ್ಪಂದ
ಮುಂಬೈ:ಭಾರತದಲ್ಲಿ  ತನ್ನ ಉಳಿದ ಸಿಮೆಂಟ್ ವ್ಯವಹಾರವನ್ನು ದಾಲ್ಮಿಯಾ ಗ್ರೂಪ್‌ಗೆ ಮಾರಾಟ ಮಾಡುವುದಾಗಿ ಘೋಷಿಸಿದೆ.
ಎರಡೂ ಕಂಪನಿಗಳ ಮಧ್ಯೆ 5,666 ಕೋಟಿ ರೂಪಾಯಿಗೆ ಒಪ್ಪಂದವಾಗಿದೆ. ಸಾಲ ತಗ್ಗಿಸಲು ತೆಗೆದುಕೊಂಡಿರುವ ಈ ಕ್ರಮದಿಂದ ಜೇಪೀ ಗ್ರೂಪ್, ಸಿಮೆಂಟ್ ವ್ಯವಹಾರ ದಿಂದ ಸಂಪೂರ್ಣವಾಗಿ ಹಿಂದೆ ಸರಿಯಲಿದೆ. ಒಪ್ಪಂದದ ಅಡಿಯಲ್ಲಿ ದಾಲ್ಮಿಯಾ ಭಾರತ್ ಲಿಮಿಟೆಡ್, ಜೇಪೀ ಗ್ರೂಪ್‌ನ ಪ್ರಮುಖ ಕಂಪನಿ  ಮತ್ತು ಅದರ ಸಂಯೋ ಜಿತ ಕಂಪನಿಯಿಂದ ವಾರ್ಷಿಕ 94 ಲಕ್ಷ ಟನ್ ಸಿಮೆಂಟ್ ಸಾಮರ್ಥ್ಯದೊಂದಿಗೆ ವಿವಿಧ ರಾಜ್ಯಗಳಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ.
ಇದರೊಂದಿಗೆ ದಾಲ್ಮಿಯಾ ಭಾರತ್ ಲಿಮಿಟೆಡ್‌ನ ಸಿಮೆಂಟ್ ಉತ್ಪಾದನಾ ಮಿತಿಯು ವಾರ್ಷಿಕ 35.9 ಮಿಲಿಯನ್ ಟನ್‌ಗಳಿಂದ 45.3 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗ ಲಿದೆ.
ಈ ಒಪ್ಪಂದವು 94 ಲಕ್ಷ ಟನ್ ವಾರ್ಷಿಕ ಸಾಮರ್ಥ್ಯದ ಸಿಮೆಂಟ್ ಘಟಕ, 67 ಲಕ್ಷ ಟನ್ ಕ್ಲಿಂಕರ್ ಸಾಮರ್ಥ್ಯ ಮತ್ತು 280 ಮೆಗಾವ್ಯಾಟ್‌ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರವನ್ನು ಒಳಗೊಂಡಿದೆ.
2026-27ರ ಆರ್ಥಿಕ ವರ್ಷದಲ್ಲಿ 75 ಮಿಲಿಯನ್ ಟನ್ ಮತ್ತು 2030-31ರ ವೇಳೆಗೆ 11 ರಿಂದ 13 ಮಿಲಿಯನ್ ಟನ್ ಸಾಮರ್ಥ್ಯದ ಸಿಮೆಂಟ್ ಕಂಪನಿಯಾಗಿ ಬದಲಾಗುವ ಗುರಿಯನ್ನು ಸಂಸ್ಥೆ ಹೊಂದಿದೆ.