ವಿಷಪೂರಿತ ಮದ್ಯ ಸೇವನೆ: ೧೨ ಸಾವು
ಪಾಟಲಿಪುತ್ರ:ಬಿಹಾರದಲ್ಲಿ ಮತ್ತೊಮ್ಮೆ ಮದ್ಯ ಸೇವನೆಯಿಂದ ೧೨ ಜನರು ಮೃತಪಟ್ಟಿ ದ್ದಾರೆ. ವಿಷಪೂರಿತ ಮದ್ಯ ಸೇವನೆ ಯಿಂದ ಸಾವನ್ನಪ್ಪಿದ್ದಾರೆ.
ಈ ಘಟನೆಯು ಸಾರಣ್ ಜಿಲ್ಲೆಯಲ್ಲಿ ಇಸುಆಪೂರ್ ಪೊಲೀಸ್ ಠಾಣೆಯ ಸರಹದ್ದಿನ ಡೋಯಿಲಾ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ೧೩ ಜನರ ಆರೋಗ್ಯ ಚಿಂತಾಜನಕವಾಗಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.