ಡಿ.೧೮ರಂದು ಮುಂಬೈನಲ್ಲಿ ನೌಕಾಪಡೆಗೆ ’ಐಎನ್‌ಎಸ್‌ ಮರ್ಮಗೋವ” ನಿಯೋಜನೆ
ನವದೆಹಲಿ:ಸಂಪೂರ್ಣ ಸ್ವದೇಶಿ ನಿರ್ಮಿತ ಪಥ ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧನೌಕೆ ‘ಐಎನ್‌ಎಸ್‌ ಮರ್ಮಗೋವಾ’ ಅನ್ನು ಭಾನುವಾರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮುಂಬೈನಲ್ಲಿ ನೌಕಾಪಡೆಗೆ ನಿಯೋಜನೆ ಮಾಡಲಿದ್ದಾರೆ.
‘ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿರುವ ಸಂದರ್ಭ ಭಾರತೀಯ ನೌಕಾಪಡೆಗೆ ಈ ನೌಕೆಯಿಂದ ಶಕ್ತಿ ಹೆಚ್ಚಬಹುದು’ ಎಂಬ ಆಶಯ ಹೊಂದ ಲಾಗಿದೆ.
‘163 ಮೀಟರ್‌ ಉದ್ದದ ಈ ಯುದ್ಧನೌಕೆ ಅತ್ಯಾಧುನಿಕ ರಾಡಾರ್‌, ಸೆನ್ಸಾರ್‌ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಒಳಗೊಂಡಿದೆ.
ಇನ್ನೊಂದು ಯುದ್ಧನೌಕೆ, ಜಲಾಂತರ್ಗಾಮಿ ಅಥವಾ ಯುದ್ಧ ವಿಮಾನವನ್ನು ಹೊಡೆದು ಉರುಳಿಸುವಂತಹ ಕ್ಷಿಪಣಿ ವ್ಯವಸ್ಥೆ ಯನ್ನೂ ಇದು ಹೊಂದಿದೆ.
7,400 ಟನ್‌ ತೂಕದ ಈ ನೌಕೆಗೆ ಗೋವಾದ ಐತಿಹಾಸಿಕ ಬಂದರು ನಗರಿಯ ಹೆಸರು ಇಡಲಾಗಿದೆ. ಕಳೆದ ಡಿ.19ರಂದು ಗೋವಾ ವಿಮೋಚನೆಯ 60ನೇ ವರ್ಷಾಚರಣೆ ಪ್ರಯುಕ್ತ ಈ ಯುದ್ಧನೌಕೆ ತನ್ನ ಮೊದಲ ಸಮುದ್ರ ಪ್ರಯಾಣ ಆರಂಭಿಸಿತ್ತು.