ಅಕ್ರಮ ಮದ್ಯ ಸೇವನೆ ಪ್ರಕರಣ: ಕಳ್ಳಸಾಗಣೆದಾರನ ಬಂಧನ
ಬಿಹಾರ:ಬಿಹಾರದಲ್ಲಿ ಅಕ್ರಮ ಮದ್ಯ ಸೇವಿಸಿ 70 ಮಂದಿ ಮೃತಪಟ್ಟ ಪ್ರಕರಣದಲ್ಲಿ ಎಸ್‌ ಐಟಿ ಅಧಿಕಾರಿಗಳ ತಂಡ ಮದ್ಯ ಕಳ್ಳಸಾಗಣೆದಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯ ಕಳ್ಳಸಾಗಣೆದಾರ ಅಖಿಲೇಶ್ ಕುಮಾರ್ ಯಾದವ್ ಅಲಿಯಾಸ್ ಅಖಿಲೇಶ್ ರೈ ಎಂಬಾತ ನನ್ನು ಬಂಧಿಸಿ, ಆರೋಪಿಯಿಂದ 2.17 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಶ್ರಖ್ ಮತ್ತು ಇಶುಪುರ್ ಪೊಲೀಸ್ ಠಾಣೆಗಳಲ್ಲಿ ದಾಖ ಲಾಗಿರುವ ಎರಡು ಎಫ್‌ಐಆರ್‌ಗಳಲ್ಲಿ ಆರೋಪಿಯ ಹೆಸರಿಲ್ಲವಾದರೂ, ಎಸ್‌ಐಟಿ ತನಿಖೆ ಯ ಸಂದರ್ಭದಲ್ಲಿ ಆರೋಪಿ ಭಾಗಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಬಂಧಿಸ ಲಾಗಿದೆ.
ಈ ಹಿಂದೆ ಮದ್ಯ ಸಾಗಾಣಿಕೆದಾರನ ಅಖಿಲೇಶ್ ಕುಮಾರ್ ಯಾದವ್ ವಿರುದ್ಧಅಬಕಾರಿ ಕಾಯ್ದೆಯಡಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.

 - 