ಕರೋನಾ ನಿಮಯ ಪಾಲಿಸಿ, ಇಲ್ಲವೇ ಭಾರತ ಜೋಡೋ ಯಾತ್ರೆ ನಿಲ್ಲಿಸಿ: ಮಾಂಡವೀಯಾ
ನವದೆಹಲಿ:ಚೀನಾದಲ್ಲಿ ಕರೋನಾದ ಹೆಚ್ಚುತ್ತಿರುವ ಸಂಕ್ರಮಣದ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವೀಯಾ ಇವರು, ರಾಹುಲ್ ಗಾಂಧಿ ಇವರಿಗೆ, `ನೀವು ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಕರೋನ ವಿಷಯ ವಾಗಿ ನಿಯಮ ಪಾಲನೆ ಮಾಡಬೇಕು ಮತ್ತು ನಿಯಮ ಪಾಲನೆ ಸಾಧ್ಯವಿಲ್ಲದೆ ಇದ್ದರೆ ಭಾರತ ಜೋಡೋ ಯಾತ್ರೆ ದೇಶದ ಹಿತದ ದೃಷ್ಟಿಯಿಂದ ನಿಲ್ಲಿಸಬೇಕು, ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿನ ಶಾಸಕ ಪಿ.ಪಿ. ಚೌಧರಿ, ನಿಹಾಲ ಚಂದ ಮತ್ತು ದೇವಜಿ ಪಟೇಲ ಇವರು ಆರೋಗ್ಯ ಸಚಿವ ಮಾಂಡವೀಯಾ ಇವರಿಗೆ ಪತ್ರ ಬರೆದು ಭಾರತ ಜೋಡೋ ಯಾತ್ರೆಯಿಂದ ಹರಡುವ ಕರೋನಾದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದರು.
 - 