 :  ಮೋದಿ ನಿರ್ದೇಶನದಂತೆ ಸಭೆ, ಸಮಾರಂಭಗಳಲ್ಲಿ ಪೆಟ್ ಬಾಟಲ್ ಬಳಕೆ ನಿಲ್ಲಿಸಿದ್ದೇವೆ: ಜೋಶಿ
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ (  ) ಅವರ ನಿರ್ದೇಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ (), ಪೆಟ್ ಬಾಟಲ್ () ಬಳಕೆ ನಿಲ್ಲಿಸಿದ್ದೇವೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ ( ) ಹೇಳಿದರು. ದೆಹಲಿಯಲ್ಲಿ ಇಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ () ಆಡಳಿತ ಮಂಡಳಿಯ 8ನೇ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಮತ್ತು ಪೆಟ್ ಬಾಟಲಿಗಳಲ್ಲಿನ ಆಹಾರ ಪದಾರ್ಥ ಸೇವನೆಯಿಂದ ಮೈಕ್ರೋ ಲೆವೆಲ್ ಪ್ಲಾಸ್ಟಿಕ್ ಹಂತ ಹಂತವಾಗಿ ಸಣ್ಣ ಪ್ರಮಾಣದಲ್ಲಿ ನಮ್ಮ ದೇಹ ಸೇರುತ್ತಿದೆ ಎಂದು ತಿಳಿಸಿದರು.
ಫೈಬರ್ ಅಂಶವಿರುವ ಮತ್ತು ಪ್ಲಾಸ್ಟಿಕ್‌ನಂತಹ ಪ್ಯಾಕೆಟ್ ಗಳಲ್ಲಿನ ಆಹಾರ ಸೇವನೆಯಿಂದ ಇಂದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | : ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ: ರಾಜ್ಯ ಸರ್ಕಾರಕ್ಕೆ ಪ್ರಲ್ಹಾದ್‌ ಜೋಶಿ ಆಗ್ರಹ
ಇಂದು ಬಹುತೇಕ ಜಂಕ್ ಫುಡ್‌ಗಳನ್ನೆಲ್ಲ ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲೇ ಪೂರೈಸಲಾಗುತ್ತಿದೆ. ಇದನ್ನು ಮನಗಂಡು ಪ್ರಧಾನಿ ಮೋದಿ ಅವರು ಸಭೆ, ಸಮಾರಂಭಗಳಲ್ಲಿ ಇಂಥ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆ ನಿಲ್ಲಿಸಲು ನಿರ್ದೇಶಿಸಿದ್ದಾರೆ ಎಂದು ತಿಳಿಸಿದ ಅವರು, ಪ್ರಧಾನಿ ಅವರ ಮಾರ್ಗದರ್ಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಕ್ರಮೇಣ ಪೆಟ್ ಬಾಟಲ್ ಬಳಕೆ ಕೈ ಬಿಟ್ಟಿದ್ದೇವೆ ಎಂದು ಸಚಿವ ಜೋಶಿ ಹೇಳಿದರು.
ದೇಶದಲ್ಲಿ ಆಹಾರ ಉತ್ಪನ್ನಗಳ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜೋಶಿ ತಿಳಿಸಿದರು.
ಜನ್ ಪೋಷಣ್ ಕೇಂದ್ರ, ಮೇರಾ ರೇಷನ್ 2.0 ಆ್ಯಪ್ ಬಿಡುಗಡೆ ಮತ್ತು ಪಿಡಿಎಸ್ ಪೂರೈಕೆ ವ್ಯವಸ್ಥೆ ಉತ್ತಮಗೊಳಿಸುವ ಮೂಲಕ 13 ರಾಜ್ಯಗಳಲ್ಲಿ ವಾರ್ಷಿಕ ₹112 ಕೋಟಿ ಉಳಿತಾಯವಾಗಿದೆ ಎಂದು ಜೋಶಿ ತಿಳಿಸಿದರು.
ಗುಣಮಟ್ಟ ನಿರ್ವಹಣಾ ವ್ಯವಸ್ಥೆ () ಮತ್ತು  2.0 ಪೋರ್ಟಲ್‌ ಅನುಷ್ಠಾನ ಪಾರದರ್ಶಕತೆ ಹೊಂದಿದೆ. ರಾಗಿ ದಾಖಲೆ ಸಂಗ್ರಹಣೆ ಮತ್ತು ಹೆಚ್ಚಿದ ಎಥೆನಾಲ್ ಉತ್ಪಾದನಾ ಸಾಮರ್ಥ್ಯವು ನಮ್ಮ ಆಹಾರ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಗೆ () ಪೋರ್ಟಲ್, ಹಾಲ್ ಮಾರ್ಕಿಂಗ್ ಪೋರ್ಟಲ್ ಅಭಿವೃದ್ಧಿ, ಪಾಲುದಾರ ಸಂಸ್ಥೆಗಳಲ್ಲಿ ತಾಂತ್ರಿಕ ತರಬೇತಿಗಾಗಿ ಕೈಪಿಡಿಗಳ ಡಿಜಿಟಲ್ ಆವೃತ್ತಿ ಅನಾವರಣ, ಅಲ್ಲದೆ,  ಚಟುವಟಿಕೆ ಪರಿಶೀಲನೆ ಮತ್ತು ಪ್ರಾಮಾಣೀಕರಣ ಸೌಲಭ್ಯಗಳನ್ನು ಹೆಚ್ಚಿಸುವ ಕುರಿತು ಈ  ಮಂಡಳಿ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸುದ್ದಿಯನ್ನೂ ಓದಿ | : ಗಲಭೆ ಘಟನೆಗಳನ್ನು ಎನ್‍ಐಎ ತನಿಖೆಗೆ ವಹಿಸಲು ವಿಜಯೇಂದ್ರ ಆಗ್ರಹ
ಸಭೆಯಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಬಿ.ಎಲ್. ವರ್ಮಾ, ಸಚಿವ ಡಾ. ಭೋಲಾ ಸಿಂಗ್, ಇತರರು ಉಪಸ್ಥಿತರಿದ್ದರು.