ಜಾಲತಾಣ ಪ್ರಭಾವಿ ಯುವತಿ ಆತ್ಮಹತ್ಯೆ
ಛತ್ತೀಸ್ ಗಡ:‌ಛತ್ತೀಸ್ ಗಡದ ಚಕ್ರಧರ್ ನಗರದಲ್ಲಿ ಸಾಮಾಜಿಕ ಜಾಲತಾಣ ಪ್ರಭಾವಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯೂಟ್ಯೂಬ್‌, ಫೇಸ್‌ ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ ನಲ್ಲಿ ತನ್ನ ರೀಲ್ಸ್‌ ಹಾಗೂ ಶಾರ್ಟ್ಸ್‌ ವಿಡಿಯೋಗಳಿಂದ ಅಪಾರ ಹಿಂಬಾಲಕ ರನ್ನು ಹೊಂದಿದ್ದ ಲೀನಾ ನಾಗವಂಶಿ ಕೊನೆಯ ಬಾರಿ ಕ್ರಿಸ್‌ ಮಸ್‌ ಹಬ್ಬದ ಪೋಸ್ಟ್‌ ಹಾಕಿದ್ದರು. ಆ ಬಳಿಕ ತಮ್ಮ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾರೆ.
ಈ ಸಂಬಂಧ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ರೀತಿ ನಿರ್ಧಾರ ತೆಗೆದುಕೊಳ್ಳುವುದರ ಹಿಂದೆ ಯಾವ ಕಾರಣವಿರಬಹುದು ಎಂದು ಪೊಲೀಸರು ಪ್ರಕರಣದ ಜಾಡನ್ನು ಪತ್ತೆ ಹಚ್ಚುತ್ತಿದ್ದಾರೆ.
ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಲೀನಾ ಇನ್ಸ್ಟಾಗ್ರಾಮ್‌ ನಲ್ಲಿ 10 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸನ್ನು ಹೊಂದಿದ್ದರು.
 - 