214 ಕೋವಿಡ್ -19ರ ಹೊಸ ಪ್ರಕರಣ ಪತ್ತೆ
ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 214 ಕೋವಿಡ್ -19ರ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಇದೇ ವೇಳೆ ಸೋಂಕಿನಿಂದ 4 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ 2, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ಕೋವಿಡ್ -19 ಸಕ್ರಿಯ ಪ್ರಕರಣಗಳು ಸಂಖ್ಯೆ 2,509 ಕ್ಕೆ ಏರಿಕೆಯಾಗಿದೆ.
ದೇಶದಾದ್ಯಂತ ನಡೆದ ಲಸಿಕಾಕರಣದಲ್ಲಿ ಇದುವರೆಗೆ 220.13 ಕೋಟಿ ಲಸಿಕೆಗಳನ್ನು ನೀಡಲಾಗಿದೆ.
ಭಾರತವು ಮೇ 4, 2021 ರಂದು ಎರಡು ಕೋಟಿ, ಜೂನ್ 23 ರಂದು ಮೂರು ಕೋಟಿ ಮತ್ತು ಕಳೆದ ವರ್ಷ ಜನವರಿ 25 ರಂದು ನಾಲ್ಕು ಕೋಟಿ ಅಧಿಕ ಲಸಿಕೆಗಳನ್ನ ನೀಡಿ ಮೈಲಿಗಲ್ಲನ್ನು ಸಾಧಿಸಿದೆ ಎಂದು ತಿಳಿಸಿದೆ.