ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿ ನೇಮಕಕ್ಕೆ ಕೊಲಿಜಿಯಂ ಶಿಫಾರಸು
ನವದೆಹಲಿ:ಸಿಜೆಐ ಡಿ ವೈ ಚಂದ್ರಚೂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸುಪ್ರೀಂ ಕೋರ್ಟ್ ( ) ಕೊಲಿಜಿಯಂ ಸಭೆಯು, 7 ನ್ಯಾಯಾಧೀಶರು ಮತ್ತು ಇಬ್ಬರು ನ್ಯಾಯವಾದಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ.
ನ್ಯಾಯಾಧೀಶರಾದ ರಾಮಚಂದ್ರ ದತ್ತಾತ್ರೇಯ ಹುದ್ದಾರ್ ಮತ್ತು ವೆಂಕಟೇಶ್ ನಾಯ್ಕ್ ಥಾವರ್ಯ ನಾಯ್ಕ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ಶಿಫಾರಸು ಮಾಡಲಾಗಿದೆ.
ಈ ಹಿಂದೆ ಶಿಫಾರಸು ಮಾಡಲಾಗಿದ್ದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ಜಡ್ಜ್ ಆಗಿ ನೇಮಕ ಮಾಡಲು ಮತ್ತೆ ಶಿಫಾರಸು ಮಾಡಲಾಗಿದೆ. ಬಾಂಬೆ ಹೈಕೋರ್ಟ್ ಜಡ್ಜ್ ಆಗಿ, ನ್ಯಾಯವಾದಿ ನೀಲಾ ಕೇದಾರ್ ಗೋಕಲೆ ಅವರನ್ನು ಶಿಫಾರಸು ಮಾಡಲಾಗಿದೆ. ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನ್ಯಾಯಾಧೀಶ ರಾದ ಮೃದುಲ್ ಕುಮಾರ್ ಕಲಿತಾ ಅವರನ್ನು ಹೆಸರಿಸಲಾಗಿದೆ.
ನ್ಯಾಯಾಧೀಶರಾದ ಪಿ ವೆಂಕಟ್ ಜ್ಯೋತಿರ್ಮಯಿ, ವಿ ಗೋಪಾಲಕೃಷ್ಣ ರಾವ್ ಅವರಿಗೆ ಆಂಧ್ರ ಹೈಕೋರ್ಟ್ ಜಡ್ಜ್ ಗಳಾಗಿ ಭಡ್ತಿಗೆ ಒಪ್ಪಿಗೆ ಸೂಚಿಸಲಾಗಿದೆ. ಮಣಿಪುರ್ ಹೈಕೋರ್ಟ್‌ಗೆ ಜುಡಿಷಿಯಲ್ ಆಫೀಸರ್‌ಗಳಾದ ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಗೋಲ್ಮೆಯಿ ಗೈಫುಲ್ಶಿಲ್ಲು ಕಬುಯಿ ಅವರನ್ನು ಜಡ್ಜ್ ಆಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. - 