ಜನವರಿ 28 ರಿಂದ 2 ದಿನ ಬ್ಯಾಂಕ್ ಮುಷ್ಕರ
ನವದೆಹಲಿ:ಜನವರಿ 28 ರಿಂದ ಜನವರಿ 31 ರವರೆಗೆ ಬ್ಯಾಂಕ್ ಯೂನಿ ಯನ್ 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿದ್ದು, ವಹಿವಾಟಿಗೆ ತೊಡಕುಂಟಾಗಲಿದೆ. ಜನವರಿ 28, ತಿಂಗಳ ನಾಲ್ಕನೇ ಶನಿವಾರ, ಈ ಕಾರಣದಿಂದಾಗಿ ಬ್ಯಾಂಕು ಗಳು ಮುಚ್ಚಿರುತ್ತವೆ.
ಭಾನುವಾರದ ಕಾರಣ ಜನವರಿ 29 ರಂದು ದೇಶಾದ್ಯಂತ ಬ್ಯಾಂಕುಗಳಿಗೆ ರಜಾ ಇರುತ್ತದೆ. ಬ್ಯಾಂಕ್ ಯೂನಿಯನ್ ಜನವರಿ 30 ಮತ್ತು 31 ರಂದು ಮುಷ್ಕರವನ್ನು ಘೋಷಿಸಿದೆ. ಹಾಗಾಗಿ ಗ್ರಾಹಕರು 4 ದಿನಗಳ ಕಾಲ ತೊಂದರೆ ಅನುಭವಿಸ ಬೇಕಾಗುತ್ತದೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‌ಬಿಯು) ಸಭೆ ಮುಂಬೈನಲ್ಲಿ ನಡೆದಿದ್ದು, ಎರಡು ದಿನಗಳ ಕಾಲ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ.
ಎನ್ ಪಿಎಸ್ ರದ್ದುಪಡಿಸಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ. ಎಲ್ಲ ಕೇಡರ್‌ಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.