ಎಂಬಿಬಿಎಸ್‌ ವಿದ್ಯಾರ್ಥಿನಿ ನಾಪತ್ತೆ: ಜೀವರಕ್ಷಕನೊಬ್ಬನ ಬಂಧನ
ಮುಂಬೈ:ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಿಂದ ಎಂಬಿಬಿಎಸ್‌ ವಿದ್ಯಾರ್ಥಿ ನಿಯೊಬ್ಬರು ನಾಪತ್ತೆಯಾದ 13 ತಿಂಗಳ ನಂತರ ಪೊಲೀಸರು ಶುಕ್ರವಾರ ಆಕೆಯನ್ನು ಅಪಹರಿಸಿದ ಆರೋಪದ ಮೇಲೆ ಜೀವರಕ್ಷಕನೊಬ್ಬನನ್ನು ಬಂಧಿಸಿದ್ದಾರೆ.
ಮಿಟ್ಟು ಸುಖದೇವ್‌ ಸಿಂಗ್‌ ಎಂಬ ಹೆಸರಿನ ಈತ ಆ ಹುಡುಗಿಯೊಂದಿಗೆ ಕ್ಲಿಕ್ಕಿಸಿದ ಸೆಲ್ಫಿಗಳೇ ಆಕೆಯ ಕೊನೆಯ ಚಿತ್ರ ಗಳಾಗಿದ್ದವು. ಆರೋಪಿಯನ್ನು ಜನವರಿ 21 ರ ತನಕ ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ ಆತ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈನ ಗ್ರ್ಯಾಂಟ್‌ ಮೆಡಿಕಲ್‌ ಜಾಲೇಜು ಹಾಗೂ ಸರ್‌ ಜೆ ಜೆ ಹಾಸ್ಪಿಟಲ್‌ ನಲ್ಲಿ ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿಯಾಗಿದ್ದ ಸದಿಚ್ಛಾ ಸಾನೆ ಎಂಬಾಕೆ ವಿರಾರ್‌ ನಿಲ್ದಾಣದಿಂದ ಬೆಳಿಗ್ಗೆ 9.58 ಕ್ಕೆ ರೈಲು ಹತ್ತಿ ಅಂಧೇರಿ ತಲುಪಿದ್ದಳು. ಅದೇ ದಿನ ಅಪರಾಹ್ನ 2 ಗಂಟೆಗೆ ಆಕೆ ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಅಂಧೇರಿಯಲ್ಲಿ ಇನ್ನೊಂದು ರೈಲು ಹತ್ತಿ ಆಕೆ ಬಾಂದ್ರಾದಲ್ಲಿಳಿದು ನಂತರ ಬ್ಯಾಂಡ್‌ಸ್ಟ್ಯಾಂಡ್‌ ಗೆ ಆಟೋದಲ್ಲಿ ತೆರಳಿದ್ದಳು.
ಆಕೆ ಆತ್ಮಹತ್ಯೆ ಮಾಡಬಹುದೆಂಬ ಶಂಕೆಯಿಂದ ಅಲ್ಲಿ ಜೀವರಕ್ಷಕನಾಗಿದ್ದ 32 ವರ್ಷದ ಸಿಂಗ್‌ ಆಕೆಯನ್ನು ಅನುಸರಿಸಿದ್ದ. ಆಗ ಆಕೆ ತಾನು ಆತ್ಮಹತ್ಯೆಗೈಯ್ಯಲು ಬಂದಿಲ್ಲ ಎಂದಿದ್ದಳು.
ಈ ಅವಧಿಯಲ್ಲಿ ಸಿಂಗ್‌ ಆಕೆಯೊಂದಿಗೆ ಮೂರು ಸೆಲ್ಫಿ ಕ್ಲಿಕ್ಕಿಸಿದ್ದರೆ, ಯುವತಿ ಆತನೊಂದಿಗಿನ ಒಂದು ಸೆಲ್ಫಿಯನ್ನು ತನ್ನ ಫೋನ್‌ನಲ್ಲಿ ಕ್ಲಿಕ್ಕಿಸಿದ್ದಳು. ಇದು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆಲ್‌ ಫೋನ್‌ ಸ್ಕ್ರೀನ್‌ಗಳು ಬ್ಲಿಂಕ್‌ ಆಗುತ್ತಿರುವುದು ಸೆರೆಯಾಗಿದ್ದವು.
ನಂತರ ವಿದ್ಯಾರ್ಥಿನಿ ಕಾಣೆಯಾಗಿರುವ ಬಗ್ಗೆ ಸುದ್ದಿಯಾಗಿದ್ದರೂ ಸಿಂಗ್‌ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.
ಈ ಹಿಂದೆಯೂ ಸಿಂಗ್‌ನನ್ನು ಪೊಲೀಸರು ಹಲವು ಬಾರಿ ವಿಚಾರಿಸಿದ್ದರೂ ಯುವತಿಗೆ ಏನಾಗಿರಬಹುದೆಂಬ ಮಾಹಿತಿ ದೊರಕಿರಲಿಲ್ಲ.