ಭಾರತದಾದ್ಯಂತ ವೈದ್ಯರಿಗಾಗಿ ಕ್ಲಿನಿಕಲ್ ಇಂಟೆಲಿಜೆನ್ಸ್ ಎಂಜಿನ್ ಬಿಡುಗಡೆ ಮಾಡಿದ ಅಪೊಲೊ ಹಾಸ್ಪಿಟಲ್ಸ್
* ಅಪೊಲೊ ಸಿಐಇ ವ್ಯವಸ್ಥೆಯನ್ನು ವೈದ್ಯಕೀಯ ನಿರ್ಧಾರಗಳನ್ನು ಬೆಂಬಲಿಸಲು ಮತ್ತು ಪ್ರಾಥಮಿಕ ಆರೈಕೆ, ಸ್ಥಿತಿ ನಿರ್ವಹಣೆ, ಮನೆಯ ಆರೈಕೆ ಮತ್ತು ಕ್ಷೇಮಕ್ಕೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ
* ಅಪೊಲೊ ಸಿಐಇ ಭಾರತದಲ್ಲಿ ಪ್ರತಿಯೊಬ್ಬ ಅರ್ಹ, ಅಭ್ಯಾಸ ಮಾಡುವ ವೈದ್ಯರಿಗೆ ಲಭ್ಯ.
ನವದೆಹಲಿ:ಏಷ್ಯಾದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಆರೋಗ್ಯ ಪೂರೈಕೆದಾರರಲ್ಲಿ ಒಂದಾದ ಅಪೋಲೋ ಹಾಸ್ಪಿಟಲ್ಸ್ ಸಮೂಹ ಇಂದು ಅಪೋಲೋ ಕ್ಲಿನಿಕಲ್ ಇಂಟೆಲಿಜೆನ್ಸ್ ಇಂಜಿನ್ ಅನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಇದನ್ನು ಅಪೊಲೊ 24|7 ಪ್ಲಾಟ್‍ಫಾರಂನಲ್ಲಿ ಅಖಿಲ ಭಾರತೀಯ ವೈದ್ಯರು ಮುಕ್ತವಾಗಿ ಬಳಸಬಹುದಾಗಿದೆ. ಎಐ ಮತ್ತು ಎಂಎಲ್ ಹೀಗೆ ಇತ್ತೀಚಿನ ತಂತ್ರಗಳನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ, ಈ ಉಪಕರಣವು ರೋಗ ನಿರ್ಣಯದ ನಿಖರತೆ, ವೈದ್ಯರ ಕ್ಷಮತೆ ಮತ್ತು ರೋಗಿಗಳ ತೃಪ್ತಿಯನ್ನು ಏಕಕಾಲದಲ್ಲಿ ಘಾತೀಯವಾಗಿ ಹೆಚ್ಚಿಸುವ ಮೂಲಕ ಭಾರತೀಯ ಆರೋಗ್ಯ ಕಾಳಜಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಲು ಸಿದ್ಧವಾಗಿದೆ.
ಈ ಕ್ಲಿನಿಕಲ್ ಇಂಟೆಲಿಜೆನ್ಸ್ ಇಂಜಿನ್, ಆರೋಗ್ಯ ವೃತ್ತಿಪರರು ಈ ವ್ಯವಸ್ಥೆ ಇಲ್ಲದಿದ್ದರೆ ತಪ್ಪಿಸಿಕೊಳ್ಳುವ ಸಾಧ್ಯತೆ ಇರುವ ಮಾದರಿಗಳನ್ನು ಗುರುತಿಸಲು ಸಹಾಯ ಮಾಡಲು ಮತ್ತು ಹೆಚ್ಚಿನ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು ಸಮರ್ಥವಾಗಿದೆ. ಸಂಖ್ಯಾತ್ಮಕವಾಗಿ ಹೇಳುವುದಾದರೆ, ಈ ಇಂಟೆಲಿಜೆನ್ಸ್ ಎಂಜಿನ್ ತನ್ನ ಶಬ್ದಕೋಶದಲ್ಲಿ 1300 ಕ್ಕೂ ಹೆಚ್ಚು ಪರಿಸ್ಥಿತಿಗಳು ಮತ್ತು 800 ರೋಗ ಲಕ್ಷಣಗಳನ್ನು ಹೊಂದಿದೆ, ಇದು ದೈನಂದಿನ ಓಪಿಡಿ ಪ್ರಕರಣಗಳಲ್ಲಿ ಶೇಕಡ 95 ರಷ್ಟು ಪ್ರಕರಣಗಳನ್ನು ಒಳಗೊಳ್ಳುತ್ತದೆ.
ಅಪೊಲೊದಿಂದ 40 ವರ್ಷಗಳ ದತ್ತಾಂಶ ಮತ್ತು 1000 ಕ್ಕೂ ಅಧಿಕ ವೈದ್ಯರ ಸಾಮೂಹಿಕ ಬುದ್ಧಿವಂತಿಕೆಯನ್ನು ಬಳಸಿಕೊಂಡು 100 ಕ್ಕೂ ಹೆಚ್ಚು ಇಂಜಿನಿಯರ್‍ಗಳು ಇದನ್ನು ನಿರ್ಮಿಸಿದ್ದಾರೆ, ಜೊತೆಗೆ ವೃತ್ತಿಪರವಾಗಿ ಮಾನ್ಯವಾಗಿರುವ ವಿಮರ್ಶೆಗಳ ನಿಯತ ಕಾಲಿಕಗಳಲ್ಲಿ ಬಂದ ಪೋಷಕ ಡೇಟಾದೊಂದಿಗೆ ಇದು ವಿಶ್ವದ ಅತಿದೊಡ್ಡ ಸಂಪರ್ಕಿತ ಆರೋಗ್ಯ ಡೇಟಾ ಲೇಕ್‍ಗಳಲ್ಲಿ ಒಂದಾ ಗಿದೆ, ಇದನ್ನು ಹಲವು ಜಾಗತಿಕ ಶೈಕ್ಷಣಿಕ ಸಂಸ್ಥೆಗಳಿಂದ ಪರೀಕ್ಷಿಸಲಾಗಿದೆ ಮತ್ತು ಮೌಲ್ಯೀಕರಿಸಲಾಗಿದೆ.
ದಕ್ಷಿಣ ಏಷ್ಯಾದ ಪ್ರದೇಶದ ವೈವಿಧ್ಯಮಯ ಪ್ರಕರಣಗಳಿಗೆ ವಿಶೇಷವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ, ಈ ಸ್ಥಳೀಯ ಪ್ರಗತಿಯು 500 ಕ್ಕೂ ಹೆಚ್ಚು ಅಪೊಲೊ ವೈದ್ಯರು ಮತ್ತು ತಜ್ಞರ ಆಂತರಿಕ ತಂಡದಿಂದ ನಿರ್ಮಿಸಲಾದ, ನಿರ್ವಹಿಸುವ ಮತ್ತು ನಿಯತವಾಗಿ ಪರಿಶೀಲಿಸುವ ಜ್ಞಾನದ ಮೂಲದಿಂದ ನಡೆಸಲ್ಪಡುತ್ತದೆ. ಇದು ಭೇದಾತ್ಮಕ ರೋಗನಿರ್ಣಯದ ಸಂದರ್ಭಗಳಲ್ಲಿ ಸಹಾಯ ಮಾಡುತ್ತದೆ ಮತ್ತು ವೈದ್ಯರನ್ನು ಬೆಂಬಿಸುವ ಮೂಲಕ ಉತ್ತಮ ಕ್ಲಿನಿಕಲ್ ಫಲಿತಾಂಶಗಳಿಗಾಗಿ ವೈದ್ಯರು ಹೆಚ್ಚು ಬೆಂಬಲಿತ ಮತ್ತು ನಿಖರ ಸೇವೆ ಒದಗಿಸಲು ಅನುವು ಮಾಡಿಕೊಡುತ್ತದೆ.
ಅಪೊಲೊ ಕ್ಲಿನಿಕಲ್ ಇಂಟಲಿಜೆನ್ಸ್ ಇಂಜಿನ್ ಅನ್ನು ಎಲ್ಲ ವೈದ್ಯರಿಗೆ ಅರ್ಪಿಸಿ ಮಾತನಾಡಿದ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‍ನ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ, “ನಾನು 90 ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಏಷ್ಯಾದ ಅತಿದೊಡ್ಡ ಓಮ್ನಿ ಚಾನಲ್ ಹೆಲ್ತ್‍ ಕೇರ್ ಇಕೋಸಿಸ್ಟಮ್ ಅನ್ನು ನಿರ್ಮಿಸುವ ಅವಕಾಶವನ್ನು ಪಡೆದಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಆದರೆ ಭಾರತವನ್ನು ನಿಜವಾಗಿಯೂ ಆರೋಗ್ಯಕರವಾಗಿಸಲು ಹೆಚ್ಚಿನದನ್ನು ಮಾಡುವುದು ಯಾವಾಗಲೂ ನನ್ನ ಬಯಕೆಯಾಗಿದೆ, ವಿಶೇಷವಾಗಿ ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್‍ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‍ಸಿಡಿ) ದೊಡ್ಡ ಸುನಾಮಿಯನ್ನು ನಾವು ಎದುರಿಸುತ್ತಿರುವಾಗ ಇದು ಅತಿ ಅಗತ್ಯವಾಗಿದೆ.
ನನ್ನ ತಂಡವು ಕ್ಲಿನಿಕಲ್ ಇಂಟೆಲಿಜೆನ್ಸ್ ಇಂಜಿನ್ ಅನ್ನು ಪರಿಕಲ್ಪನೆ ಮಾಡಿದಾಗ, ಅದು ನಮಗೆ ತಿಳಿದಿರುವಂತೆ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಯನ್ನು ಉಂಟುಮಾಡುವ ಒಂದು ಪ್ರಗತಿ ಎಂದು ನನಗೆ ತಿಳಿದಿತ್ತು. ಇಐಇ ಅನ್ನು ಅಪೊಲೊಗೆ ಸೀಮಿತ ಗೊಳಿಸಿಲ್ಲ; ಭಾರತದಾದ್ಯಂತ ವೈದ್ಯರೊಂದಿಗೆ ಇದನ್ನು ಹಂಚಿಕೊಳ್ಳಬೇಕಾಗಿದೆ. ಆದ್ದರಿಂದ ಭಾರತದಲ್ಲಿನ ಪ್ರತಿಯೊಬ್ಬ ಅರ್ಹ, ಅಭ್ಯಾಸ ಮಾಡುವ ವೈದ್ಯರಿಗೆ ಅಪೊಲೊ ಸಿಐಇ ನೀಡಲು ನನಗೆ ಸಂತೋಷವಾಗಿದೆ, ಭೌಗೋಳಿಕ, ಪ್ರಾದೇಶಿಕ ಅಥವಾ ಆದಾಯದ ವಿಭಜನೆಯಿಂದ ಸ್ವತಂತ್ರವಾಗಿ ಸಮಯೋಚಿತ ಮತ್ತು ಹೆಚ್ಚು ನಿಖರವಾದ ರೋಗನಿರ್ಣಯದ ಮೂಲಕ ನಾವು ಭಾರತೀಯರನ್ನು ಆರೋಗ್ಯವಂತರನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎನ್ನುವ ಖಾತರಿ ನನಗಿದೆ” ಎಂದು ನುಡಿದರು.
“ಗೇಮ್-ಚೇಂಜಿಂಗ್ ಅಪೋಲೋ ಕ್ಲಿನಿಕಲ್ ಇಂಟೆಲಿಜೆನ್ಸ್ ಇಂಜಿನ್‍ನ ಬಿಡುಗಡೆಯು ಅಪೋಲೋ ಹಾಸ್ಪಿಟಲ್ಸ್‍ನಲ್ಲಿ ನಮಗೆ ಒಂದು ಪ್ರಮುಖ ಮೈಲಿಗಲ್ಲು” ಎಂದು ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‍ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಸಂಗೀತಾ ರೆಡ್ಡಿ ಹೇಳಿದ್ದಾರೆ. “ಕೆಲವು ತಿಂಗಳುಗಳ ಹಿಂದೆ ನಾವು ಒಪಿಡಿಗಳಲ್ಲಿ ಸಿಐಎ ವ್ಯವಸ್ಥೆಯೊಂದಿಗೆ ಅಪೊಲೊ ವೈದ್ಯರನ್ನು ಸಶಕ್ತ ಗೊಳಿಸಿದಾಗ, ರೋಗನಿರ್ಣಯದ ನಿಖರತೆ, ವೈದ್ಯರ ಕ್ಷಮತೆ ಮತ್ತು ರೋಗಿಗಳ ತೃಪ್ತಿಯಲ್ಲಿ ನಾವು ಸ್ಪಷ್ಟವಾದ ಸುಧಾರಣೆ ಯನ್ನು ಕಂಡುಕೊಂಡಿದ್ದೇವೆ. ಪ್ರಸ್ತುತ 4000 ಕ್ಕೂ ಹೆಚ್ಚು ಅಪೊಲೊ ವೈದ್ಯರು ಇದನ್ನು ಬಳಸುತ್ತಿದ್ದಾರೆ ಮತ್ತು ಅವರ ರೋಗನಿರ್ಣಯದಲ್ಲಿ ಮತ್ತು ಫಲಿತಾಂಶಗಳಲ್ಲಿ ಗಣನೀಯ ಪರಿಣಾಮವನ್ನು ಕಂಡಿದ್ದಾರೆ.
ಇದು ಅವರ ದಿನನಿತ್ಯದ ಒಪಿಡಿ ಕಾರ್ಯಾಚರಣೆಗಳ ಭಾಗವಾಗಿದೆ. ರೋಗಿಗಳು ಮತ್ತು ವೈದ್ಯರಿಗೆ ಆರೋಗ್ಯ ಸೇವೆಯ ಅನುಭವವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಲು ನಾವು ಬದ್ಧರಾಗಿದ್ದೇವೆ ಮತ್ತು ಅಪೋಲೊ ಸಿಐಇ ಆ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಬಣ್ಣಿಸಿದರು.
ಸಿಸ್ಟಮ್ಸ್ ಚೆಕ್ಕರ್ ಮತ್ತು ಈ ಪರಿಣಿತ ಕ್ಲಿನಿಕಲ್ ಜ್ಞಾನ ವ್ಯವಸ್ಥೆಯನ್ನು ಹೊಂದಿರುವ ವೈದ್ಯರ ಮೂಲಕ ಸುರಕ್ಷಿತ, ಪ್ರಾಯೋಗಿಕ ವಾಗಿ ಮೌಲ್ಯೀಕರಿಸಿದ ಆರೋಗ್ಯ ಸಂವಹನಗಳೊಂದಿಗೆ ಪ್ರವೇಶಕ್ಕಾಗಿ ಬಹು- ಚಾನೆಲ್ ಬೇಡಿಕೆಯನ್ನು ಪೂರೈಸಲು ಸಂಸ್ಥೆಗಳಿಗೆ ಸಹಾಯ ಮಾಡುವ ಮೂಲಕ ಅಪೋಲೊ ಸಿಐಇ ಆರೋಗ್ಯ ಪೂರೈಕೆದಾರರಿಗೆ ಕಾರ್ಯಾಚರಣೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.
ಅಪೋಲೊ ಸಿಐಇ ಬಳಕೆದಾರರ ರೋಗಲಕ್ಷಣಗಳನ್ನು ವಿಶ್ಲೇಷಿಸುತ್ತದೆ, ಕಾರಣವನ್ನು ನಿರ್ಧರಿಸುತ್ತದೆ ಮತ್ತು ಮುಂದಿನ ಉತ್ತಮ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಸಿಐಇ ಎನ್ನುವುದು ಸ್ವಯಂ- ಕಲಿಕೆಯ ಎಂಜಿನ್ ಆಗಿದ್ದು, ಜ್ಞಾನ ಸಾಗರ ಲಭ್ಯತೆಯೊಂದಿಗೆ ವೈದ್ಯರಿಗೆ ಸಹಾಯ ಮಾಡುತ್ತದೆ. ಕಳೆದ ವರ್ಷವೊಂದರಲ್ಲೇ, ಬಿಡುಗಡೆಯಾದ ಕ್ಲಿನಿಕಲ್ ಪೇಪರ್‍ಗಳ ಪರಿಣಾಮವಾಗಿ ಸಿಐಇ 6,00,000 ಹೊಸ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಮರ್ಥವಾಗಿದೆ.
ಸಿಐಇ ಅಪೊಲೊ ಆಸ್ಪತ್ರೆಗಳಲ್ಲಿ ಬಳಕೆಗೆ ಲಭ್ಯವಿದೆ ಮತ್ತು 6ನೇ ಫೆಬ್ರವರಿ 2023 ರಂದು ವ್ಯಾಪಕ ಬಳಕೆಗೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು .. ಗೆ ಭೇಟಿ ನೀಡಿ
ಅಪೋಲೋ ಹಾಸ್ಪಿಟಲ್ಸ್ ಎಂಟರ್‍ಪ್ರೈಸ್ ಲಿಮಿಟೆಡ್ ಕುರಿತು ಎಎಚ್‍ಇಎಲ್ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಆರೋಗ್ಯ ಕಾಳಜಿ ಸಮೂಹವಾಗಿದೆ. ಡಾ. ಪ್ರತಾಪ್ ಸಿ. ರೆಡ್ಡಿ ಅವರು 1983 ರಲ್ಲಿ ಇದನ್ನು ಸ್ಥಾಪಿಸಿದರು, ಭಾರತದಲ್ಲಿ ಮೊದಲ ಕಾರ್ಪೊರೇಟ್ ಆರೋಗ್ಯ ಪೂರೈಕೆದಾರರಾಗಿ, ಕಂಪನಿಯು ಆಸ್ಪತ್ರೆಗಳು, ಔಷಧಾಲಯ ಗಳು, ಪ್ರಾಥಮಿಕ ಆರೈಕೆ ಮತ್ತು ರೋಗನಿರ್ಣಯ ಕೇಂದ್ರಗಳು, ಟೆಲಿಹೆಲ್ತ್ ಕ್ಲಿನಿಕ್‍ಗಳು ಮತ್ತು ಡಿಜಿಟಲ್ ಆರೋಗ್ಯ ಸೇವೆಗಳನ್ನು ತನ್ನ ಅಂಗಸಂಸ್ಥೆಗಳ ಮೂಲಕ ನಿರ್ವಹಿಸುತ್ತದೆ.
ಅಪೊಲೊದ ಓಮ್ನಿ ಚಾನಲ್ ಡಿಜಿಟಲ್ ಆರ್ಮ್, ಅಪೊಲೊ 24|7 ಒಂದೇ ಆನ್‍ಲೈನ್ ಪ್ಲಾಟ್‍ಫಾರ್ಮ್ ಆಗಿದ್ದು ಅದು ಬಳಕೆದಾರರಿಗೆ ಆನ್‍ಲೈನ್ ಫಾರ್ಮಸಿ, ಆನ್‍ಲೈನ್ ವೈದ್ಯರ ಸಮಾಲೋಚನೆಗಳು ಮತ್ತು ಮನೆಯಲ್ಲಿ ಡಯಾಗ್ನೋಸ್ಟಿಕ್ ಲ್ಯಾಬ್ ಪರೀಕ್ಷೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಅಪೊಲೊ 24|7 ವಿಶ್ಲೇಷಣಾತ್ಮಕ ಉತ್ಕೃಷ್ಟತೆ, ಕೈಗೆಟುಕುವ ವೆಚ್ಚ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ವ್ಯಾಪಕವಾದ ಸಂಶೋಧನೆಗಳನ್ನು ಸಂಯೋಜಿಸುವ ಮೂಲಕ ಆರೋಗ್ಯವನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡುತ್ತದೆ.