ಅಗ್ನಿ ದುರಂತ: ಆರು ಮನೆಗಳು ಸುಟ್ಟು ಭಸ್ಮ
ಅಸ್ಸಾಂ:ಕಮ್ರೂಪ್ ಜಿಲ್ಲೆಯ ಛಾಯಗಾಂವ್ ಪ್ರದೇಶದಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಕನಿಷ್ಠ ಆರು ಮನೆಗಳು ಸುಟ್ಟು ಭಸ್ಮಗೊಂಡಿವೆ.
ಛಾಯಗಾಂವ್ ಮೆರ್ಗಂಡಾ ಪ್ರದೇಶದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ, ತದನಂತರ ಹತ್ತಿರದ ಮನೆಗಳಿಗೆ ವ್ಯಾಪಿಸಿದೆ. ಬೆಂಕಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಗಳು ಸುಟ್ಟು ಭಸ್ಮವಾಗಿವೆ.
“ಮೊದಲು ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಿರದ ಮನೆಗಳಿಗೆ ವ್ಯಾಪಿಸಿದೆ. ಬೆಂಕಿಯಲ್ಲಿ ಆರು ಮನೆಗಳು ಸುಟ್ಟು ಭಸ್ಮವಾಗಿವೆ” ಎಂದು ಸ್ಥಳೀಯ ಯುವಕರು ತಿಳಿಸಿದ್ದಾರೆ.
ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.