ಸಿಮೆಂಟ್ ದರ ಕಡಿತ..!
ನವದೆಹಲಿ :ಜಿಎಸ್ ಟಿ ಮಂಡಳಿ ಸಭೆ ಫೆಬ್ರವರಿ 18 ರಂದು ನಡೆಯಲಿದ್ದು, ಸಿಮೆಂಟ್ ಮೇಲಿನ ದರಗಳನ್ನು ಕಡಿತಗೊಳಿಸಲು ನಿರ್ಧರಿಸಲಿದೆ ಎಂದು ಹೇಳಲಾಗಿದೆ.
ಫೆ.18ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದೆ. ಹಣಕಾಸು ಸಚಿವರು ಘೋಷಿಸಿದಂತೆ ಸಿಮೆಂಟ್ ಮೇಲಿನ ದರ ಕಡಿತದ ಬಗ್ಗೆ ನಿರ್ಧರಿಸಲು ಫಿಟ್ ಮೆಂಟ್ ಸಮಿತಿ ಸಭೆ ಸೇರ ಲಿದೆ. ಪ್ರಸ್ತುತ, ಸಿಮೆಂಟ್ ಮೇಲೆ ಶೇ.28 ರಷ್ಟು ಜಿಎಸ್ಟಿ ಇದೆ ಎಂದು ಸಿಬಿಐಸಿ ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದ್ದಾರೆ.
ಮೂಲಸೌಕರ್ಯ ವಲಯಕ್ಕೆ ಪ್ರಮುಖ ಇನ್ಪುಟ್ ಆಗಿರುವ ಸಿಮೆಂಟ್ ಮೇಲಿನ 28% ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತ ಗೊಳಿಸುವ ಉದ್ಯಮದ ಬೇಡಿಕೆಯನ್ನು ಜಿಎಸ್ಟಿ ಕೌನ್ಸಿಲ್ ಅಡಿಯಲ್ಲಿ ಫಿಟ್ಮೆಂಟ್ ಸಮಿತಿಗೆ ಕೊಂಡೊಯ್ಯಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸೂಚಿಸಿದ್ದರು.
ಹೀಗಾಗಿ ಫೆ. 18 ರಂದು ನಡೆಯಲಿರುವ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಸಿಮೆಂಟ್ ಬೆಲೆಯಲ್ಲಿ ಕಡಿಮೆ ಮಾಡುವ ಸಾಧ್ಯತೆ ಇದ್ದು, ಪ್ರತಿ ಚೀಲಕ್ಕೆ 30 ರಿಂದ 40 ರೂ.ಕಡಿತ ವಾಗಬಹುದು ಎನ್ನಲಾಗಿದೆ.
 - 