ಮಹಾರಾಷ್ಟ್ರ ರಾಜ್ಯಪಾಲ ರಾಜೀನಾಮೆ: ರಮೇಶ್ ಬಯಸ್ ನೇಮಕ
ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೋಶ್ಯಾರಿ ರಾಜೀ ನಾಮೆಯನ್ನು ಅಂಗೀಕರಿಸಿದ್ದಾರೆ.
ಜಾರ್ಖಂಡ್ ರಾಜ್ಯಪಾಲರಾಗಿರುವ ರಮೇಶ್ ಬಯಸ್ ಅವರನ್ನು ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ನೇಮಿಸಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಅವರ ಕಾಮೆಂಟ್‌ಗಳ ಕುರಿತು ಇತ್ತೀಚಿನ ವಿವಾದದ ನಂತರ ಕೋಶ್ಯಾರಿ ಅವರು ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ.
ಮಹಾರಾಷ್ಟ್ರ ರಾಜಕೀಯ ವಿಪ್ಲವದ ನಡುವೆ ರಾಜ್ಯಪಾಲರಾಗಿದ್ದ 81 ವರ್ಷದ ಕೋಶ್ಯಾರಿ ಅವರು ಹಲವು ಸವಾಲುಗಳನ್ನೂ ಎದುರಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಅವರು ಹುದ್ದೆಗೆ ರಾಜೀನಾಮೆ ನೀಡಿ ಓದಲು ಮತ್ತು ಬರವಣಿಗೆಗೆ ಸಮಯವನ್ನು ವಿನಿಯೋಗಿಸುವ ಬಯಕೆ ವ್ಯಕ್ತಪಡಿಸಿದ್ದರು.