ಹಜ್ ತೀರ್ಥಯಾತ್ರೆ: ಅರ್ಜಿ ಸಲ್ಲಿಕೆಗೆ ಮಾರ್ಚ್ 10 ಅಂತಿಮ
ನವದೆಹಲಿ:ಭಾರತದ ಹಜ್ ಸಮಿತಿಯು ಹಜ್ ತೀರ್ಥಯಾತ್ರೆ 2023ಗೆ ತೆರಳುವವರಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಯಾತ್ರಿಗಳು ಫೆಬ್ರವರಿ 10,2023 ರಿಂದ ಮಾರ್ಚ್ 10,2023ರೊಳಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಹ ಯಾತ್ರಾರ್ಥಿಗಳು ಡಿಸೆಂಬರ್ 31, 2023ರ ವರೆಗೆ ಮಾನ್ಯವಾಗಿರುವ ಪಾಸ್‌ಪೋರ್ಟ್‌ಗಳನ್ನು ಹೊಂದಿರ ಬೇಕು. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಯಾತ್ರಿಕರು ತಮ್ಮ ಪಾಸ್‌ ಪೋರ್ಟ್‌ಗಳ ಮೊದಲ ಮತ್ತು ಕೊನೆಯ ಪುಟಗಳ ಜೆರಾಕ್ಸ್ ಪ್ರತಿಗಳನ್ನು ತೆಲಂಗಾಣ ಹಜ್ ಸಮಿತಿ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
ತೆಲಂಗಾಣ ಹಜ್ ಸಮಿತಿಯ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 040-232987932023 ಸಂಖ್ಯೆಯನ್ನು ಸಂಪರ್ಕಿಸಬಹುದು.