ಅಮೇಜಾನ್ ಪೇ ಸಂಸ್ಥೆಗೆ 3.06 ಕೋಟಿ ರೂ ದಂಡ
ಪ್ರೀಪೇಡ್ ಪೇಮೆಂಟ್ ಇನ್ಸ್​​ಟ್ರುಮೆಂಟ್ಸ್ ಮತ್ತು ಕೆವೈಸಿ ವಿಚಾರದಲ್ಲಿ ಕೆಲ ನಿಯಮಗಳಿಗೆ ಬದ್ಧವಾಗದ ಸಂಸ್ಥೆಯ ಮೇಲೆ ಆರ್​ಬಿಐ 3,06,66,000 ರೂ ದಂಡ ವಿಧಿಸಿದೆ.
ಈ ಸಂಬಂಧ ಆರ್​ಬಿಐ ಅಮೇಜಾನ್ ಪೇ ಸಂಸ್ಥೆಗೆ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು. ಇದಕ್ಕೆ ಅಮೇಜಾನ್ ಪೇ ಕೊಟ್ಟ ಪ್ರತ್ಯುತ್ತರದ ಆಧಾರದ ಮೇಲೆ ಆರ್​ಬಿಐ ಸುಮಾರು 3 ಕೋಟಿ ರೂನಷ್ಟು ದಂಡ ವಿಧಿಸಲು ತೀರ್ಮಾನಿಸಿತು ಎನ್ನಲಾಗಿದೆ.