ಏರ್​ಬಿಎನ್​ಬಿ: ಶೇ.30ರಷ್ಟು ಸಿಬ್ಬಂದಿಗೆ ಗೇಟ್‌ ಪಾಸ್‌
ಆದರೆ, ಏರ್​ಬಿಎನ್​ಬಿ ಈ ವರ್ಷ ತನ್ನ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಸನ್ನಾಹದಲ್ಲಿದೆ. ಸಂಸ್ಥೆಯ ಮಾರುಕಟ್ಟೆ ತಂತ್ರಗಾರಿಕೆ ತುಸು ಬದಲಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ರೆಕ್ರೂಟಿಂಗ್ ಟೀಮ್ ಅನ್ನು ಪರಿಷ್ಕರಿಸ ಲಾಗುತ್ತಿದ್ದು, ಅದರ ಭಾಗವಾಗಿಯೇ 30ಮಂದಿಯನ್ನು ಕೈಬಿಡಲು ನಿರ್ಧರಿಸಲಾಗಿದೆ.
ಕಳೆದ ವರ್ಷ ಏರ್​ಬಿಎನ್​ಬಿಯ ವ್ಯವಹಾರ ಶೇ. 11ರಷ್ಟು ವೃದ್ಧಿಸಿತ್ತು. ಈ ವರ್ಷ ಸಂಸ್ಥೆ ಶೇ. 2ರಿಂದ 4ರಷ್ಟು ಹೊಸಬರನ್ನು ನೇಮಕಾತಿ ಮಾಡಿಕೊಳ್ಳಲು ಯೋಜಿಸಿದೆ.
2008ರಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆರಂಭವಾದ ಏರ್​ಬಿಎನ್​ಬಿ ಲಕ್ಸುರಿ ಮನೆ, ರಿಸಾರ್ಟ್, ಹೋಮ್​ಸ್ಟೇ, ಹೋಟೆಲ್​ಗಳ ಬುಕಿಂಗ್ ಮಾಡುವ ಆನ್​ಲೈನ್ ಮಾರುಕಟ್ಟೆಯಾಗಿದೆ. ಇದು ಬ್ರೋಕರ್ ಕಂಪನಿ ಯಾಗಿದ್ದು ಪ್ರತೀ ಬುಕಿಂಗ್​ಗೆ ಕಮಿಷನ್ ಪಡೆಯುವ ಮೂಲಕ ಆದಾಯ ಗಳಿಸುತ್ತದೆ.