ವೃತ್ತಿಪರ ಧ್ವನಿ ಸೃಷ್ಟಿಕರ್ತರು ಮತ್ತು ಧ್ವನಿ ತಜ್ಞರ ಬಳಕೆಗೆ ಅಲ್ಟ್ರಾಬ್ಯಾಂಡ್ ತರಂಗಾಂತರ ಶ್ರೇಣಿಯ ಪ್ಲೇಬ್ಯಾಕ್‌ನೊಂದಿಗೆ ಕ್ಲೋಸ್ಡ್‌ ಮಾನಿಟರ್‌ ಸ್ಟುಡಿಯೊ ಹೆಡ್‌ಫೋನ್ಸ್‌  ಪರಿಚಯಿಸಿದ ಸೋನಿ ಇಂಡಿಯಾ
ವೃತ್ತಿಪರ ಸಂಗೀತ ನಿರ್ಮಾಪಕರ ಸಹಯೋಗದೊಂದಿಗೆ, ಸೃಜನಶೀಲತೆಯ ಉದ್ದೇಶವನ್ನು ನಿಖರವಾಗಿ ಪುನರ್‌ ಉತ್ಪಾದಿಸುವ ಧ್ವನಿ  ಸಾಧಿಸಲು ಎಂಡಿಆರ್‌-ಎಂ1  ವಿನ್ಯಾಸಗೊಳಿಸಲಾಗಿದೆ.  ರಿಕಾರ್ಡಿಂಗ್‌, ಮಿಕ್ಸಿಂಗ್ ಮತ್ತು ಗರಿಷ್ಠ ರೆಸಲ್ಯೂಷನ್ ಸಾಮರ್ಥ್ಯದೊಂದಿಗೆ ಸ್ಟಿರಿಯೊ ಸೌಂಡ್ ಸೃಷ್ಟಿಸುವ ಪರಿಣತಿ ಸಾಧಿಸಲಾಗಿದೆ
ನವದೆಹಲಿ:  26ನೇ ಸೆಪ್ಟೆಂಬರ್ 2024:ಎಂಡಿಆರ್‌-ಎಂ1 ನಿರ್ದೇಶಿತ ಧ್ವನಿ ಸೋರಿಕೆ ನಿಯಂತ್ರಿಸುವ (ಕ್ಲೋಸ್ಡ್ ಮಾನಿಟರ್) ಹೆಡ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವುದಾಗಿ ಸೋನಿ ಇಂಡಿಯಾ ಇಂದು ಇಲ್ಲಿ ಪ್ರಕಟಿಸಿದೆ.
ಸಂಗೀತ ರಚನೆಕಾರರು, ಧ್ವನಿ ಪರಿಣತರು ಮತ್ತು ಧ್ವನಿ ಎಂಜಿನಿಯರ್‌ಗಳಿಗೆ ಯಾವುದೇ ಪರಿಸರದಲ್ಲಿ ಸಂಗೀತವನ್ನು ಸೃಷ್ಟಿಸಲು ನೆರವಾಗುವ ರೀತಿಯಲ್ಲಿ ಈ ಹೆಡ್‌ಫೋನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.  ಈ ಹೆಡ್‌ಫೋನ್‌ಗಳು ಶ್ರವಣ ಅನುಭವವನ್ನು ಬಾಹ್ಯ ಸದ್ದಿನಿಂದ ಪ್ರತ್ಯೇಕಿಸಲಿದ್ದು,   ಹಗುರ ಮತ್ತು ಆರಾಮದಾಯಕ ವಿನ್ಯಾಸದೊಂದಿಗೆ  ಬಾಹ್ಯ ಸದ್ದಿನಿಂದ ಶ್ರವಣ ಅನುಭವ ಪ್ರತ್ಯೇಕಿಸುವ, ಧ್ವನಿಯಲ್ಲಿನ ಅಸ್ಪಷ್ಟತೆ ನಿವಾರಿಸಲಿವೆ.  ಬಳಕೆದಾರರು ತಮ್ಮದೇ ಆದ ಪರಿಸರದಲ್ಲಿ  ಸ್ಟುಡಿಯೊದಲ್ಲಿ ಇರುವಂತಹ ರೀತಿಯಲ್ಲಿಯೇ ಧ್ವನಿ ಸೃಷ್ಟಿಸಲು ಇವು ಅವಕಾಶ ಕಲ್ಪಿಸಿಕೊಡಲಿವೆ. ಎಂಡಿಆರ್‌- 1 ಹೆಡ್‌ಫೋನ್‌ಗಳು ಸ್ಟುಡಿಯೊ ಧ್ವನಿ ಗುಣಮಟ್ಟವನ್ನು ಗರಿಷ್ಠ ಸೌಲಭ್ಯ ಮತ್ತು ವಿಶ್ವಾಸಾರ್ಹತೆಯೊಂದಿಗೆ ಸಂಯೋಜಿಸುತ್ತವೆ. ಇದು ವ್ಯಾಪಕ ಶ್ರೇಣಿಯ ಸಂಗೀತ ಸೃಷ್ಟಿಸಲು ಮತ್ತು ಹೆಚ್ಚಿನ ರೆಸಲ್ಯೂಷನ್ ಧ್ವನಿ ಬಳಕೆಗೆ ಹೆಚ್ಚು ಸೂಕ್ತವಾಗಿದೆ.
ಎಂಡಿಆರ್‌-ಎಂ1 ವ್ಯಾಪಕ ಶ್ರೇಣಿಯ ಸಂಗೀತ ಹೊರಹೊಮ್ಮುವುದಕ್ಕೆ ನೆರವಾಗಲು ಎಚ್ಚರಿಕೆಯಿಂದ ರಾಗ ಸಂಯೋಜನೆ ಮಾಡಲಾದ ಸಂಗೀತ ಪಸರಿಸುವ ಸೌಲಭ್ಯದೊಂದಿಗೆ ಗರಿಷ್ಠ ರೆಸಲ್ಯೂಷನ್‌ ಧ್ವನಿ ಒಳಗೊಂಡು ಸ್ಟುಡಿಯೊ ಧ್ವನಿ ಗುಣಮಟ್ಟವನ್ನು ನೀಡುತ್ತದೆ.   ಧ್ವನಿಯ ಗುಣಮಟ್ಟವು ವಿಶಿಷ್ಟವಾಗಿ ಅಭಿವೃದ್ಧಿಪಡಿಸಿದ ಚಾಲನಾ ಘಟಕವಾಗಿದ್ದು, ಇದು ಅಲ್ಟ್ರಾ-ವೈಡ್‌ಬ್ಯಾಂಡ್ ಪ್ಲೇಬ್ಯಾಕ್ (5ಹರ್ಟ್ಸ್‌ – 80ಕೆಹರ್ಟ್ಸ್‌) ಸಾಧಿಸುತ್ತದೆ. ಇದು ಸಾಕಷ್ಟು ಪ್ರಮಾಣ ಮತ್ತು ಕಡಿಮೆ ಅಸ್ಪಷ್ಟತೆಯೊಂದಿಗೆ ಕೆಳಮಟ್ಟದ ತರಂಗಾಂತರಗಳನ್ನು ಪುನರ್‌ ಹೊರಹೊಮ್ಮಿಸಲು ಮೃದುವಾದ ಅಂಚಿನ ಆಕಾರದ ಸಂಯೋಜನೆಯನ್ನು ಮತ್ತು ಗರಿಷ್ಠ ಪ್ರಮಾಣದ ತರಂಗಾಂತರಗಳನ್ನು ನಿಖರವಾಗಿ ಪುನರ್‌ ಹೊರಹೊಮ್ಮಿಸಲು ಗಟ್ಟಿಯಾದ ಗುಮ್ಮಟದ ಆಕಾರ ಹೊಂದಿದೆ.
ಸಂಗೀತ ಸೋರಿಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ಅಥವಾ ತಡೆಗಟ್ಟುವ ಕ್ಲೋಸ್ಡ್‌ ಅಕೌಸ್ಟಿಕ್ ರಚನೆಯು ಹೆಡ್‌ಫೋನ್‌ ಸುತ್ತುವರಿದ ಶಬ್ದ ಮತ್ತು ಧ್ವನಿ ಸೋರಿಕೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ, ಇದರಿಂದಾಗಿ ಈ ಹೆಡ್‌ಫೋನ್‌ಗಳನ್ನು ವಿವಿಧ ಸಂಗೀತ ಹೊರಹೊಮ್ಮಿಸುವ ಪ್ರಕ್ರಿಯೆಗಳಲ್ಲಿ ಬಳಸಲು ಸೂಕ್ತವಾಗಿದೆ. ಆದ್ದರಿಂದ ಪ್ರತಿಯೊಂದು  ಸಂಗೀತ ರಚನೆಗೆ ಎಚ್ಚರಿಕೆಯಿಂದ ರಾಗ ಸಂಯೋಜಿಸಬಹುದು.  ಸಂಗೀತ ರಚನೆಕಾರರ ನಿಖರತೆ ಮತ್ತು ದೃಢೀಕರಣ  ಬೆಂಬಲಿಸಲು ನಿಗಾ ಇರಿಸಬಹುದು. ಟ್ಯೂನ್ ಮಾಡಿದ ಪೋರ್ಟ್ (ಬೀಟ್ ರೆಸ್ಪಾನ್ಸ್ ಕಂಟ್ರೋಲ್) ಕಡಿಮೆ ತರಂಗಾಂತರಗಳನ್ನು ನಿಯಂತ್ರಿಸಲು ವಾತಾಯನ ರಂಧ್ರವಾಗಿ ಕಾರ್ಯನಿರ್ವಹಿಸುತ್ತದೆ. ತೆಳುಪರೆ ಕಾರ್ಯಾಚರಣೆಯನ್ನು ಉತ್ತಮಗೊಳಿಸುವ ಮೂಲಕ ಸುಧಾರಿತ ಕಡಿಮೆ- ತರಂಗಾಂತರಗಳ ಕಾರ್ಯಾಚರಣೆಯನ್ನು ಸುಧಾರಿಸಬಹುದು.  ತುಂಬಾ ಬಿಗಿಯಾದ ಬಾಸ್ ಪ್ರತಿಕ್ರಿಯೆಯೊಂದಿಗೆ ಧ್ವನಿಯನ್ನು ನಿಖರವಾಗಿ ಪುನರ್‌ ಹೊರಹೊಮ್ಮಿಸಲು ಇದರಿಂದ  ಸಾಧ್ಯವಾಗಲಿದೆ.
ವೃತ್ತಿಪರರು ಮತ್ತು ಗ್ರಾಹಕರಿಗೆ ಸಂಗೀತ ರಚನೆ ಮತ್ತು ಆಲಿಸುವ ಅನುಭವಗಳನ್ನು ಹೆಚ್ಚಿಸುವ ಉತ್ಪನ್ನಗಳನ್ನು ತಯಾರಿಸುವುದು ಸೋನಿಯ ಮುಖ್ಯ ಉದ್ದೇಶವಾಗಿದೆ. ನಿಖರ ಮತ್ತು ಸಮೃದ್ಧ ಸ್ವರೂಪದ ಸಂಗೀತ ಅನುಭವ ಒದಗಿಸಲು, ಬ್ಯಾಟರಿ ಸ್ಟುಡಿಯೋಸ್‌ನ ಮಾಸ್ಟರಿಂಗ್ ಎಂಜಿನಿಯರ್, ಮೈಕ್ ಪಿಯಾಸೆಂಟಿನಿ ಮತ್ತು ಬರ್ಕ್‌ಲಿ ಎನ್‌ವೈಸಿ ಮತ್ತು ಅಕಿಹಿರೊ ನಿಶಿಮುರಾದ ಮಿಕ್ಸಿಂಗ್‌ ಎಂಜಿನಿಯರ್‌ ಆಫ್‌ ಪವರ್‌ ಸೇರಿದಂತೆ ಉದ್ಯಮದಲ್ಲಿನ ಕೆಲವು ಉನ್ನತ ಸೌಂಡ್ ಎಂಜಿನಿಯರ್‌ಗಳ ಸಹಯೋಗದೊಂದಿಗೆ ಎಂಡಿಆರ್‌-ಎಂ1 ಹೆಡ್‌ಫೋನ್‌ಗಳನ್ನು ತಯಾರಿಸಲಾಗಿದೆ.
ಎಂಡಿಆರ್‌-ಎಂ1 ಮಾನಿಟರ್ ಹೆಡ್‌ಫೋನ್‌ಗಳು ಸ್ಟುಡಿಯೊ ಬಳಕೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಸಂಗೀತ ಸೋರಿಕೆ ತಡೆಗಟ್ಟುವ ರಚನೆಯನ್ನು ಒಳಗೊಂಡಿವೆ. ಈ ವಿನ್ಯಾಸವು ಸುತ್ತಮುತ್ತಲಿನ ಸದ್ದನ್ನು ಕಡಿಮೆ ಮಾಡುವುದರ ಜೊತೆಗೆ ಧ್ವನಿ ಸೋರಿಕೆಯನ್ನೂ ತಡೆಯುತ್ತದೆ. ಬಾಹ್ಯ ಗೊಂದಲಗಳಿಲ್ಲದೆ ನಿಖರವಾದ ಧ್ವನಿ ಮೇಲ್ವಿಚಾರಣೆಯ ಮೇಲೆ ಗಮನ ಕೇಂದ್ರೀಕರಿಸಲು ಇದು ಧ್ವನಿ ವೃತ್ತಿಪರರಿಗೆ ಅನುವು ಮಾಡಿಕೊಡುತ್ತದೆ. ಸಂಗೀತ ಸೋರಿಕೆ ತಡೆಗಟ್ಟುವ ಸಂರಚನೆಯು ಬೇರ್ಪಡಿಸುವಿಕೆಯನ್ನು ಹೆಚ್ಚಿಸುತ್ತದೆ, ಆಡಿಯೊ ಮಿಕ್ಸ್‌ನಲ್ಲಿನ ಪ್ರತಿಯೊಂದು ವಿವರವನ್ನು ಸ್ಪಷ್ಟತೆಯೊಂದಿಗೆ ಕೇಳುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಇದು ನಿಖರವಾದ ಮಿಶ್ರಣ ಮತ್ತು ಮಾಸ್ಟರಿಂಗ್‌ಗೆ ಮಹತ್ವದ್ದಾಗಿದೆ. ಹಿನ್ನೆಲೆ ಸದ್ದು ತೆಗೆದುಹಾಕುವ ಮೂಲಕ ಮತ್ತು ಧ್ವನಿ ಸಮಗ್ರತೆ  ಕಾಪಾಡಿಕೊಳ್ಳುವ ಮೂಲಕ, ಎಂಡಿಆರ್‌-ಎಂ1 ವೃತ್ತಿಪರ ಸ್ಟುಡಿಯೊ ವ್ಯವಸ್ಥೆಗೆ ಸರಿಸಮಾನವಾದ ವಾತಾವರಣವನ್ನು ಒದಗಿಸುತ್ತದೆ. ಇದು ಯಾವುದೇ ವ್ಯವಸ್ಥೆಯಲ್ಲಿ ನಿಖರವಾದ ಧ್ವನಿಗ್ರಹಣ ಕೆಲಸಕ್ಕಾಗಿ ಆದರ್ಶ ಸಾಧನವಾಗಿದೆ. ಎಂಡಿಆರ್‌-ಎಂ1 ಹೆಡ್‌ಫೋನ್‌ಗಳು ಸೂಕ್ಷ್ಮ  ಸ್ವರೂಪದ ಹಗುರ ವಿನ್ಯಾಸ  ಒಳಗೊಂಡಿರುತ್ತವೆ.