ಕನ್ಯಾದಾನ ಮಾಡಿದ ಅಮ್ಮ ಲೈಂಗಿಕ ಅಲ್ಪಸಂಖ್ಯಾತಳು…!!
ಹರಿಯಾಣ:ಹರಿಯಾಣದಲ್ಲಿ ತಾಯಿಯೊಬ್ಬಳು ತನ್ನ ಮಗಳ ಕನ್ಯಾದಾನವನ್ನು ಮಾಡಿದ್ದು, ಇದನ್ನು ಕಂಡು ಜನರು ಭಾವುಕರಾಗಿದ್ದಾರೆ.
ಕನ್ಯಾದಾನ ಮಾಡಿದ ಅಮ್ಮ ಲೈಂಗಿಕ ಅಲ್ಪಸಂಖ್ಯಾತಳು. ಈಕೆ ಬಾಲ್ಯದಿಂದಲೂ ಜನ್ನತ್ ಎಂಬ ಹುಡುಗಿ ಯನ್ನು ಸಲಹುತ್ತಿದ್ದಳು, ಆಕೆಯ ಮದುವೆ ಮಾಡಿದ್ದಾರೆ. ಮದುವೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಈ ಅಮ್ಮನ ಕನ್ಯಾದಾನ ಅಲ್ಲಿದ್ದವರ ಹೃದಯ ಕಲುಕಿದೆ.
ಮಗಳ ಮದುವೆ ಇಷ್ಟೊಂದು ಸಡಗರದಿಂದ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದ ಈ ಅಮ್ಮ, ಮಗಳನ್ನು ತಬ್ಬಿಕೊಂಡು ಅಳಲು ಪ್ರಾರಂಭಿ ಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜನ್ನತ್ ಬಾಲ್ಯದಿಂದಲೂ ತನ್ನೊಂದಿಗೆ ವಾಸಿಸುತ್ತಿದ್ದಳು ಎಂದು ಟ್ರಾನ್ಸ್​ಜೆಂಡರ್​ ಮಹಿಳೆ ಹೇಳಿಕೊಂಡಿದ್ದಾರೆ.
ಈ ಹಿಂದೆ ಟ್ರಾನ್ಸ್ಜೆಂಡರ್ ಸಮುದಾಯವು ಮತ್ತೊಂದು ವಿಶಿಷ್ಟ ಉಪಕ್ರಮವನ್ನು ತೆಗೆದುಕೊಂಡಿತ್ತು. ಬಡ ಕುಟುಂಬದ ಐದು ಹಿಂದೂ ಮತ್ತು ಮುಸ್ಲಿಂ ಹೆಣ್ಣುಮಕ್ಕಳ ಮದುವೆಯ ಜವಾಬ್ದಾರಿಯನ್ನು ಅವರು ತೆಗೆದುಕೊಂಡಿದ್ದರು.
 - 