ಎರಿಕ್ ಗಾರ್ಸೆಟ್ಟಿ – ಭಾರತಕ್ಕೆ ಹೊಸ ಯುಎಸ್ ರಾಯಭಾರಿ
ನವದೆಹಲಿ:ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಅವರು ಭಾರತಕ್ಕೆ ಹೊಸ ಯುಎಸ್ ರಾಯಭಾರಿಯಾಗಲಿದ್ದಾರೆ.
 ಸೆನೆಟ್ ಗಾರ್ಸೆಟ್ಟಿಯ ನಾಮನಿರ್ದೇಶನವನ್ನು ದೃಢಪಡಿಸಿದೆ. ಭಾರತಕ್ಕೆ  ರಾಯಭಾರಿಯಾಗಿ ಅವರ ನಾಮನಿರ್ದೇಶನವನ್ನು ಸೆನೆಟ್‌ನಲ್ಲಿ 52-42 ರಿಂದ ಅಂಗೀಕರಿಸಲಾಯಿತು.
ಮಾಜಿ ಮೇಯರ್ ಅವರ ನಾಮನಿರ್ದೇಶನವು ಜುಲೈ 2021 ರಿಂದ  ಕಾಂಗ್ರೆಸ್‌ಗೆ ಬಾಕಿ ಉಳಿದಿತ್ತು. ಅವರು ಬೈಡನ್ ಅವರಿಂದ ಪ್ರತಿಷ್ಠಿತ ರಾಜತಾಂತ್ರಿಕ ಪೋಸ್ಟಿಂಗ್‌ಗೆ ನಾಮನಿರ್ದೇಶನಗೊಂಡರು.