  : ರಿಯಾ ಸಿಂಘಾಗೆ ಮಿಸ್‌ ಯೂನಿವರ್ಸ್‌ ಇಂಡಿಯಾ ಮುಕುಟ
ನವದೆಹಲಿ: ರಿಯಾ ಸಿಂಘಾ ( ) ಮಿಸ್‌ ಯೂನಿವರ್ಸ್ ಇಂಡಿಯಾ 2024 (   2024) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಜಾಗತಿಕ ಸ್ಪರ್ಧೆಯಾದ ಮಿಸ್‌ ಯೂನಿವರ್ಸ್ 2024ರಲ್ಲಿ (  2024) ಭಾರತವನ್ನು ಪ್ರ ತಿನಿಧಿಸಲಿದ್ದಾರೆ.
ಮಿಸ್‌ ಯೂನಿವರ್ಸ್ ಇಂಡಿಯಾ 2024ರ ಗ್ರ್ಯಾಂಡ್ ಫಿನಾಲೆ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆಯಿತು. ರಿಯಾ ವಿಜೇತರಾಗಿ ಹೊರಹೊಮ್ಮಿದರು ಮತ್ತು ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಗೆಲುವಿಗೆ ರಿಯಾ ಸಂತೋಷ ವ್ಯಕ್ತಪಡಿಸಿದರು. “ಇಂದು ನಾನು ಮಿಸ್‌ ಯೂನಿವರ್ಸ್ ಇಂಡಿಯಾ 2024 ಕಿರೀಟವನ್ನು ಗೆದ್ದಿದ್ದೇನೆ. ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಬರಲು ನಾನು ತುಂಬಾ ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಈ ಕಿರೀಟಕ್ಕೆ ಸಾಕಷ್ಟು ಅರ್ಹಳೆಂದು ಹೇಳಬಹುದು. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ” ಎಂದರು.
ನಟಿ ಮತ್ತು ಮಿಸ್‌ ಯೂನಿವರ್ಸ್ ಇಂಡಿಯಾ 2015ರ ಊರ್ವಶಿ ರೌತೆಲಾ, “ಭಾರತ ಈ ವರ್ಷ ಮತ್ತೆ ಮಿಸ್‌ ಯೂನಿವರ್ಸ್ ಕಿರೀಟವನ್ನು ಗೆಲ್ಲುತ್ತದೆ” ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ:‘ ’  : ಒಟಿಟಿಗೆ ಲಗ್ಗೆಯಿಟ್ಟ ʼಮಿಸ್ಟರ್‌ ಬಚ್ಚನ್ʼ ಸಿನಿಮಾ