: ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್ ಫೇಸ್ (ಎಪಿಐ)-ಚಾಲಿತ ಅನುಸರಣೆ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ಜತೆಗೆ, 3 ವರ್ಷಗಳಲ್ಲಿ 30-40% ಸಂಯೋ ಜಿತ ವಾರ್ಷಿಕ ಪ್ರಗತಿದರ(ಸಿಎಜಿಆರ್)ದ ಮೇಲೆ ಚಿತ್ತ ನೆಟ್ಟ ಟ್ಯಾಲಿ ಸೊಲ್ಯೂಷನ್ಸ್
ಸಂಪೂರ್ಣ ಸಂಪರ್ಕಿತ-ಜಿಎಸ್ ಟಿ ಸಾಮರ್ಥ್ಯದೊಂದಿಗೆ ಸಂಪರ್ಕಿತ ಅನುಭವದ ಮರು ವ್ಯಾಖ್ಯಾನ ; ಎಲ್ಲಾ ಹೊಸ ಟ್ಯಾಲಿಪ್ರೈಮ್ 5.0ನೊಂದಿಗೆ ಜಾಗತಿಕ ಬಹು-ಭಾಷಾ ಏಕೀಕರಣ(ಸಂಯೋಜನೆ) ವಿಸ್ತರಣೆ
ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ(ಎಂಎಸ್ಎಂಇ)ಗಳನ್ನು ಸಬಲೀಕರಿಸುವ ಮುಂದುವರಿದ ನಿರಂತರ ದೂರದೃಷ್ಟಿಯೊಂದಿಗೆ ಟ್ಯಾಲಿ ಸೊಲ್ಯೂಷನ್ಸ್, ಇಂದು ಹೊಚ್ಚ ಹೊಸದಾದ ಟ್ಯಾಲಿಪ್ರೈಮ್ 5.0ರ ಜಾಗತಿಕ ಅನಾವರಣ(ಬಿಡುಗಡೆ) ಘೋಷಿಸಿದೆ. ಅದರ ಸಂಪರ್ಕಿತ ಸೇವೆಗಳ ಜಾಲ(ಸೂಟ್)ವನ್ನು ಇದು ಹೆಚ್ಚಿಸಿದೆ. ಉದ್ಯಮ ವ್ಯಾಪಾರ ವ್ಯವಹಾರ ನಿರ್ವಹಣೆಯ ಸಾಫ್ಟ್‌ವೇರ್ ಒದಗಿಸುವ ಪ್ರಮುಖ ತಂತ್ರಜ್ಞಾನ ಕಂಪನಿ ಟ್ಯಾಲಿ, ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್ ಫೇಸ್(ಎಪಿಐ)-ಚಾಲಿತ ತೆರಿಗೆ ಫೈಲಿಂಗ್‌ನೊಂದಿಗೆ ಸಂಪರ್ಕಿತ ಸೇವೆಗಳಲ್ಲಿ ಹೊಸ ಮಾದರಿ ತರುತ್ತಿದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಮಧ್ಯಮ-ವರ್ಗದ ಜನರ ವ್ಯಾಪಾರ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಕಂಪನಿಯ ದೂರದೃಷ್ಟಿಗೆ ಅನುಗುಣವಾಗಿ ಟ್ಯಾಲಿಪ್ರೈಮ್ 5.0 ಬಿಡುಗಡೆಯಾಗಿದೆ.
ಜಿಎಸ್ ಟಿ ಪೋರ್ಟಲ್‌ಗೆ ಭೇಟಿ ನೀಡದೆಯೇ ‘ಸಂಪರ್ಕಿತ ಜಿಎಸ್ ಟಿ’ಯೊಂದಿಗೆ ಸೌಲಭ್ಯ ಹೊಂದಿರುವ ಇತ್ತೀಚಿನ ಆವೃತ್ತಿಯು ಎಲ್ಲಾ ಆನ್‌ಲೈನ್ ಜಿಎಸ್ ಟಿ ಕಾರ್ಯಾಚರಣೆಗಳಿಗೆ ಏಕೀಕೃತ ಇಂಟರ್ ಫೇಸ್ ಆಗಿ ಕಾರ್ಯ ನಿರ್ವಹಿಸುತ್ತದೆ. ಈ ಬಿಡುಗಡೆಯು ಇ-ಇನ್‌ವಾಯ್ಸಿಂಗ್ ಮತ್ತು ಇ-ವೇ ಬಿಲ್ ಸೃಜನೆಯ ಸಾಮರ್ಥ್ಯ, ವಾಟ್ಸ್ಆಪ್ ಏಕೀಕರಣ ಇತ್ಯಾದಿಗಳನ್ನು ಒಳಗೊಂಡಿರುವ ಟ್ಯಾಲಿಯ ಸಂಪರ್ಕಿತ(ಸಂಪರ್ಕ) ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಮಧ್ಯಪ್ರಾಚ್ಯ ಮತ್ತು ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪರಿಹರಿ ಸಲು, ಟ್ಯಾಲಿಪ್ರೈಮ್ 5.0, ಮುಂದುವರಿದ ಬಹು-ಭಾಷಾ ಸಾಮರ್ಥ್ಯಗಳನ್ನು ಸೇರಿಸುತ್ತದೆ. ಇದು ಅರೇಬಿಕ್ ಮತ್ತು ಬಾಂಗ್ಲಾ ಭಾಷಾ ಇಂಟರ್ ಫೇಸ್ ಗಳಲ್ಲಿ ಧ್ವನಿ ನಿರೂಪಣೆ ಅಥವಾ ಸಂಭಾಷಣೆ(ಫೋನೆಟಿಕ್)ಗೆ ಬೆಂಬಲ ನೀಡುತ್ತದೆ.
ಈ ಹೊಸ ಪರಿಹಾರವು ಜಿಎಸ್ ಟಿ ಪೋರ್ಟಲ್‌ಗೆ ನೇರ ಸಂಪರ್ಕ ಸೇರಿದಂತೆ ವಿಶಿಷ್ಟ ವೈಶಿಷ್ಟ್ಯಗಳ ಒಂದು ಶ್ರೇಣಿ ಒಳಗೊಂಡಿದೆ. ಇದು ವೇಗದ ಡೇಟಾ ಅಪ್‌ಲೋಡ್ ಮತ್ತು ಡೌನ್‌ಲೋಡ್ ಅನುಕೂಲ ಒದಗಿಸುತ್ತದೆ. ಜಿಎಸ್ ಟಿಆರ್1 ರಿಟರ್ನ್ ಫೈಲಿಂಗ್, ಜಿಎಸ್ ಟಿಆರ್1 ರೀಕಾನ್ ಮತ್ತು ಜಿಎಸ್ ಟಿಆರ್-3ಬಿ ರೀಕಾನ್ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಹೊಸ ರಿಕಾನ್ ಹೊಂದಾಣಿಕೆಗಳನ್ನು ಸಕ್ರಿಯಗೊಳಿಸುತ್ತದೆ. ಅಪಾಯ ಗುರುತಿಸುವಿಕೆ ಮತ್ತು ಲೆಡ್ಜರ್ ರಚನೆಯಲ್ಲಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ವೈಶಿಷ್ಟ್ಯ ಇವೆಲ್ಲವೂ ಟ್ಯಾಲಿಗೆ ಅನನ್ಯವಾಗಿವೆ. ಈ ಎಲ್ಲಾ ವೈಶಿಷ್ಟ್ಯಗಳು ತೆರಿಗೆ ದಾಖಲೆಗಳ ಪರಿಪೂರ್ಣ ನಿರ್ವಹಣೆಯಿಂದ ಹಿಡಿದು ಆದಾಯ ತೆರಿಗೆ ವಿವರ ಸಲ್ಲಿಸು ವ(ರಿಟರ್ನ್ ಫೈಲಿಂಗ್) ತನಕ ಬೆಂಬಲ ಒದಗಿಸುವ ಜತೆಗೆ, ಸಮಗ್ರ ಅಥವಾ ಏಕೀಕೃತ ಅನುಭವ ತರುತ್ತದೆ.
ಈ ಹೊಸ ಉತ್ಪನ್ನದ ಅನಾವರಣ ಮತ್ತು ಇತರೆ ಉತ್ಪನ್ನಗಳ ಬಿಡುಗಡೆ ಉಪಕ್ರಮಗಳೊಂದಿಗೆ ಟ್ಯಾಲಿಯು, ಮುಂದಿನ 3 ವರ್ಷಗಳಲ್ಲಿ ಪ್ರಸ್ತುತ ಇರುವ 2.5 ದಶಲಕ್ಷಕ್ಕಿಂತ ಹೆಚ್ಚಿನ ಬಳಕೆದಾರರ ನೆಲೆಯನ್ನು 50% ವಿಸ್ತರಿಸುವ ಗುರಿ ಹೊಂದಿದೆ. ಜತೆಗೆ, ಮುಂದಿನ 3 ವರ್ಷಗಳಲ್ಲಿ 30-40% ಸಂಯೋಜಿತ ವಾರ್ಷಿಕ ಪ್ರಗತಿ ದರ(ಸಿಎಜಿಆರ್)ದ ಮೇಲೆ ಚಿತ್ತ ನೆಟ್ಟಿದೆ.
ತಮ್ಮ ಅಭಿಪ್ರಾಯ ಹಂಚಿಕೊಂಡ ಟ್ಯಾಲಿ ಸೊಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ತೇಜಸ್ ಗೋಯೆಂಕಾ, “ಎಂಎಸ್‌ಎಂಇಗಳ ವ್ಯಾಪಾರ ಕಾರ್ಯಾಚರಣೆಗಳನ್ನು ಸರಳಗೊಳಿಸಲು ಸಹಾಯ ಮಾಡಲು ನಾವು ನಮ್ಮ ತಂತ್ರಜ್ಞಾನವನ್ನು ನಿರಂತರವಾಗಿ ಆವಿಷ್ಕರಿಸುತ್ತಿದ್ದೇವೆ. ನಮ್ಮ ಇತ್ತೀಚಿನ ಬಿಡುಗಡೆಯು ಜಿಎಸ್ ಟಿ ಫೈಲಿಂಗ್ ಅನ್ನು ಸರವಾಗಿಸಲು, ಭಾರತೀಯ ವ್ಯವಹಾರಗಳಿಗೆ ರಗಳೆ-ಮುಕ್ತವಾಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ, ಉದ್ಯಮ ವ್ಯವಹಾರಗಳ ಒಂದು ಸಣ್ಣ ಭಾಗ ಮಾತ್ರ ಎಪಿಐ-ಆಧಾರಿತ ಫೈಲಿಂಗ್ ಬಳಸುತ್ತಿದೆ. ಆದರೆ ನಾವು ಅದನ್ನು ಬದಲಾಯಿಸುವ ಗುರಿ ಹೊಂದಿದ್ದೇವೆ. ಹೊಸ ಉತ್ಪನ್ನದ ಅನಾವರಣದೊಂದಿಗೆ, ಎಂಎಸ್ಎಂಇಗಳ ಪರಿಪೂರ್ಣ ಜಿಎಸ್ ಟಿ ಫೈಲಿಂಗ್ ಪ್ರಯಾಣ ಅಥವಾ ಪ್ರಕ್ರಿಯೆ ಕ್ರೋಢೀಕರಿಸುವುದು ನಮ್ಮ ಆದ್ಯತೆಯ ಗಮನವಾಗಿದೆ. ಇದು ತೆರಿಗೆದಾರರ 60%-70% ಸಮಯ ಉಳಿಸಲು ಅನುವು ಮಾಡಿಕೊಡುತ್ತದೆ. ಈ ಬಿಡುಗಡೆಯು ಪೂರೈಕೆದಾರರ ಜಿಎಸ್ ಟಿಯ ನೈಜ-ಸಮಯದ ಸ್ಥಿತಿಯನ್ನು ಸಹ ನೀಡುತ್ತದೆ. ಜತೆಗೆ, ಅವರ ಐಟಿಸಿಯನ್ನು ರಕ್ಷಿಸುತ್ತದೆ” ಎಂದರು.
ಎಂಎಸ್ಎಂಇಗಳು ತಮ್ಮ ಕಾರ್ಯಾಚರಣೆಗಳಿಗೆ ಪರಿಣಾಮಕಾರಿ ತಾಂತ್ರಿಕ ಪರಿಹಾರಗಳನ್ನು ಹುಡುಕುತ್ತಿವೆ. ಈ ನಿಟ್ಟಿನಲ್ಲಿ ಟ್ಯಾಲಿ ಪ್ರೈಮ್ 5.0 ಸರಳ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಪರಿಹಾರ ಒದಗಿಸುತ್ತದೆ. ಇದು ಹೊಸ ವೈಶಿಷ್ಟ್ಯಗಳೊಂದಿಗೆ ವ್ಯಾಪಾರ ನಿರ್ವಹಣೆಯನ್ನು ಹೆಚ್ಚಿಸುತ್ತದೆ. ಇ-ಇನ್‌ವಾಯ್ಸ್ ಸೃಜನೆ, ಬಳಕೆದಾರ ಸ್ನೇಹಿ ಡ್ಯಾಶ್‌ಬೋರ್ಡ್‌ಗಳು, ವಾಟ್ಸ್ಆಪ್ ಏಕೀಕರಣ ಮತ್ತು ಎಕ್ಸೆಲ್ ಆಮದಿಗೆ ಅನುವು ಮಾಡಿಕೊಡುತ್ತದೆ. ಈ ಹೊಸ ಉತ್ಪನ್ನವು ವ್ಯವಹಾರಗಳನ್ನು ಅವುಗಳ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು ಮತ್ತು ಬಳಕೆದಾರರ ಅನುಭವ ಹೆಚ್ಚಿಸುವ ಟ್ಯಾಲಿಯ ಉದ್ದೇಶಕ್ಕೆ ಅನುಗುಣವಾಗಿದೆ. ಈ ಬಿಡುಗಡೆಯು ಎಲ್ಲಾ ಸಕ್ರಿಯ ಟಿಎಸ್ಎಸ್ ಚಂದಾದಾರರಿಗೆ ಉಚಿತವಾಗಿದೆ.
• ಟ್ಯಾಲಿಪ್ರೈಮ್ 5.0 ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್ ಫೇಸ್ ಉತ್ಪನ್ನವು ಜಿಎಸ್ ಟಿಆರ್1, ಜಿಎಸ್ ಟಿಆರ್2ಎ, ಜಿಎಸ್ ಟಿಆರ್2ಬಿ, ಜಿಎಸ್ ಟಿಆರ್3ಬಿ ಮತ್ತು ಸಿಎಂಪಿ-08ರ ಆನ್‌ಲೈನ್ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತವೆ.