ಅಮಲಿನಲ್ಲಿ ಸಮವಸ್ತ್ರದಲ್ಲೇ ಕುಣಿದು ಕುಪ್ಪಳಿಸಿದ ಎಎಸ್​ಐ ಅಮಾನತು
ಕೇರಳ:ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ (ಎಎಸ್​ಐ) ಅನ್ನು ಅಮಾನತು ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ಸ್ಪೆಷಲ್​ ಬ್ರಾಂಚ್​ ವರದಿಯ ಪ್ರಕಾರ ಇಡುಕ್ಕಿ ಜಿಲ್ಲೆಯ ಸಾಂಥನಪರದ ಎಎಸ್​ಐ ಕೆ.ಪಿ.ಶಾಜಿ ಎಂಬುವರನ್ನು ಅಮಾನತು ಮಾಡ ಲಾಗಿದೆ. ಪೂಪ್ಪಾರ ಬಳಿ ದೇವಸ್ಥಾನದ ಉತ್ಸವದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಡಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಸ್ಪೆಷಲ್​ ಬ್ರಾಂಚ್​ ತನಿಖೆ ನಡೆಸಿ ವರದಿ ಸಲ್ಲಿಸಿತ್ತು.