ಇಲ್ಲಿ ಅಲ್ಫೊನ್ಸೋ ಮಾವಿನ ಹಣ್ಣು ಕಂತಿನ ಮೂಲಕ ಮಾರಾಟ..!
ಪುಣೆ, ಮಹಾರಾಷ್ಟ್ರ:ಪುಣೆಯ ವ್ಯಾಪಾರಿಯೊಬ್ಬರು ಅಲ್ಫೊನ್ಸೋ ಮಾವಿನ ಹಣ್ಣು ಗಳನ್ನು ಕಂತಿನ ಮೂಲಕ ಮಾರಾಟ ಮಾಡುತ್ತಿದ್ದಾರೆ!
ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಅಲ್ಫೊನ್ಸೋ ಮಾವು ಹಣ್ಣಗಳಿಗೆ ಬೇರೆಯದ್ದೇ ಸ್ಥಾನವಿದೆ. ಈ ಹಣ್ಣುಗಳು ದುಬಾರಿಯೂ ಹೌದು. ಅಲ್ಫೊನ್ಸೋ ಋತುವಿನ ಬಾಗಿಲು ತಟ್ಟುತ್ತಿರುವಾಗ, ಪುಣೆ ನಿವಾಸಿಗಳು ಈ ದುಬಾರಿ ಮಾವಿನ ಹಣ್ಣುಗಳನ್ನು ಖರೀದಿ ಸುವುದು ಹೇಗೆ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ. ಯಾಕೆಂದರೆ, ಪುಣೆಯಲ್ಲಿ ವ್ಯಾಪಾರಿಗಳು ಈ ಹಣ್ಣನ್ನು ಇಎಂಇ ಮೂಲಕ ಮಾರಾಟ ಮಾಡುತ್ತಿದ್ದಾರೆ.
ಹ್ಯಾಪಸ್ ಎಂದೂ ಕರೆಯಲಾಗುವ ಅಲ್ಫೊನ್ಸೋ ಮಾವಿನಹಣ್ಣುಗಳು ತಮ್ಮ ವಿಶಿಷ್ಟ ರುಚಿ, ಸುವಾಸನೆ ಮತ್ತು ಉತ್ತಮ ಗುಣಮಟ್ಟಕ್ಕಾಗಿ ಜಗತ್ಪ್ರಸಿದ್ಧವಾಗಿವೆ. ಅಲ್ಫೊನ್ಸೋ ವಿವಿಧ ವಿಧದ ಮಾವಿನಹಣ್ಣುಗಳಲ್ಲಿ ಪ್ರೀಮಿಯಂ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಅಲ್ಫೊನ್ಸೋ ಮಾವು ಭಾರೀ ತುಟ್ಟಿಯಾಗಿರುತ್ತದೆ.
ನಾವು ಇಎಂಇ ಮೂಲಕ ಮಾವು ಮಾರಾಟವನ್ನು ಆರಂಭಿಸಿದ್ದೇವೆ. ಆ ಮೂಲಕ ಕಳೆದು ಹೋಗಿರುವ ಗ್ರಾಹಕರನ್ನು ವಾಪಸ್ ಕರೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಗ್ರಾಹಕರು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಸಿ ಇಎಂಐ ಮೂಲಕ ಅಲ್ಫೊನ್ಸೋ ಮಾವು ಖರೀದಿಸಬಹುದಾಗಿದೆ. ಅಲ್ಫೊನ್ಸೋ ಮಾವು ಡಜನ್‍ಗೆ 600 ರೂ.ನಿಂದ 1300ರೂ. ವರೆಗೂ ಇದೆ ಎಂದು ಪುಣೆಯ ಮಾವು ವ್ಯಾಪಾರಿ ತಿಳಿಸಿದ್ದಾರೆ.