ದ್ವೇಷಪೂರಿತ ಭಾಷಣ: ಬಲಪಂಥೀಯ ಕಾರ್ಯಕರ್ತೆ ಕಾಜಲ್ ಬಂಧನ
ಉನಾ:ರಾಮ ನವಮಿಯಂದು ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ಥಾನಿ ಅವರನ್ನು ಬಂಧಿಸಿದ ನಂತರ ಗುಜರಾತ್‌ನ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಉನಾದಲ್ಲಿ ಹಿಂದೂಸ್ಥಾನಿ ಪೊಲೀಸರ ಮುಂದೆ ಶರಣಾಗಿದ್ದರು. ನಂತರ ಅವರನ್ನು ಬಂಧಿಸಿ ಉನಾದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಉನಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎನ್‌ಕೆ ಗೋಸ್ವಾಮಿ ತಿಳಿಸಿದ್ದಾರೆ.
ಅವರನ್ನು ಜುನಾಗಢ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಗೋಸ್ವಾಮಿ ಹೇಳಿದರು.
ಮಾರ್ಚ್ 30 ರಂದು ರಾಮ ನವಮಿ ಹಬ್ಬದಂದು ಹಿಂದೂಸ್ಥಾನಿ ಅವರು ಮಾಡಿದ ಭಾಷಣವು ಎ.1 ರ ರಾತ್ರಿ ಉನಾ ಪಟ್ಟಣದಲ್ಲಿ ಕೋಮು ಘರ್ಷಣೆಗೆ ಕಾರಣವಾಗಿತ್ತು.