ಅಮೆಜಾನ್: 27 ಸಾವಿರ ಕೆಲಸಗಾರರ ವಜಾ- ಸುಳಿವು
ನವದೆಹಲಿ:ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಮತ್ತೊಮ್ಮೆ 27 ಸಾವಿರ ಕೆಲಸಗಾರರನ್ನು ವಜಾಗೊಳಿಸುವ ಸುಳಿವು ನೀಡಿದ್ದಾರೆ.
ಸಂಸ್ಥೆಯ ಬೆಳವಣಿಗೆಗೆ ಅಗತ್ಯವಾದ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಸುಮಾರು 27,000 ಉದ್ಯೋಗಿಗಳನ್ನು ವಜಾಗೊಳಿಸುವ ಕಠಿಣ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು, ಅಮೆಜಾನ್ ತನ್ನ ಎರಡನೇ ಹಂತದ ವಜಾಗಳನ್ನು ನಡೆಸಿತ್ತು. ಇದರ ಪರಿಣಾಮವಾಗಿ 9,000 ಉದ್ಯೋಗಿಗಳು ಕೆಲಸ ಕಳೆದು ಕೊಂಡಿದ್ದರು. ಇವರಿಗೆ ಸಂಸ್ಥೆ ಬೇರ್ಪಡಿಕೆ ಪಾವತಿ, ಆರೋಗ್ಯ ವಿಮೆ ಪ್ರಯೋಜನ ಗಳು ಮತ್ತು ಉದ್ಯೋಗ ನಿಯೋಜನೆ ಸಹಾಯವನ್ನು ಒದಗಿಸುತ್ತಿದೆ. ಮೊದಲ ಹಂತದ ವಜಾಗೊಳಿಸುವಿಕೆಯಲ್ಲಿ 18,000 ಉದ್ಯೋಗಿಗಳನ್ನು ವಜಾಗೊಳಿಸತ್ತು.
ನಮ್ಮ ಒಟ್ಟಾರೆ ವೆಚ್ಚವನ್ನು ಸುವ್ಯವಸ್ಥಿತಗೊಳಿಸಲು ಕಳೆದ ಹಲವು ತಿಂಗಳುಗಳಲ್ಲಿ ನಾವು ಅನೇಕ ಇತರ ಬದಲಾವಣೆಗಳನ್ನು ಮಾಡಿದ್ದೇವೆ.ನಾವು ನಮ್ಮ ವ್ಯವಹಾರದಲ್ಲಿ ಏನನ್ನು ನೋಡುತ್ತಿದ್ದೇವೆ ಎಂಬುದನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಕಂಪನಿಯ  ಷೇರುದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗತ್ತಿದೆ.