ನಾಳೆಯಿಂದ ಮುಂಬೈನಲ್ಲಿ  ಸ್ಟೋರ್‌ ಆರಂಭ
ಮುಂಬೈ:ಭಾರತದ ಮೊದಲ  ಸ್ಟೋರ್‌ ‘ ಬಿಕೆಸಿ’ ಮುಂಬೈನಲ್ಲಿ ಏ.18ರಿಂದ ಆರಂಭವಾಗಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವರ್ಲ್ಡ್‌ ಡ್ರೈವ್‌ ಮಾಲ್‌ನಲ್ಲಿ ಈ ಸ್ಟೋರ್‌ ಪ್ರಾರಂಭವಾಗಲಿದೆ.
 ಕಂಪನಿ ಸಿಇಒ ಟಿಮ್ ಕುಕ್ ಈ ಮಳಿಗೆಯನ್ನು ಉದ್ಘಾಟನೆ ಮಾಡಲಿದ್ದಾರೆ.
‘ ಬಿಕೆಸಿ’ ಎಂದು ಈ ಸ್ಟೋರ್‌ಗೆ ಹೆಸರಿಡಲಾಗಿದೆ. ಸ್ಟೋರ್‌ನ ವಿನ್ಯಾಸವು ಮುಂಬೈನ ಪ್ರಸಿದ್ಧ ‘ಕಪ್ಪು-ಹಳದಿ ಟಾಕ್ಸಿ’ಯಿಂದ ಪ್ರೇರಣೆಗೊಂಡಿದೆ. ಅಲ್ಲದೇ ಪೂರ್ಣ ಸ್ಟೋರ್‌ ಅನ್ನು ಶೇ 100 ರಷ್ಟು ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣ ಮಾಡ ಲಾಗಿದೆ.
ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಸಲುವಾಗಿ ಅತ್ಯಾಧುನಿಕವಾಗಿ ಮಳಿಗೆಯನ್ನು ಡಿಸೈನ್‌ ಮಾಡಲಾಗಿದ್ದು, ಪ್ರವೇಶ ದ್ವಾರದಲ್ಲಿ ‘ಹಲೋ ಮುಂಬೈ’ ಎಂದು ಬರೆಯಲಾಗಿದೆ. ಮುಂಬೈ ರೈಸಿಂಗ್ ಕಾರ್ಯಕ್ರಮದ ಮೂಲಕ ಸ್ಟೋರ್ ತೆರೆದುಕೊಳ್ಳಲಿದೆ.
ವಿಶೇಷವೆಂದರೆ ಈ ಮಳಿಗೆಯಲ್ಲಿ 20 ಭಾಷೆ ಮಾತನಾಡುವ 100 ಜನ ಸೇವಾ ಪ್ರತಿನಿಧಿಗಳಿರಲಿದ್ದಾರೆ.
ಮಳಿಗೆಯಲ್ಲಿ ಭಾರತದಲ್ಲಿ Appleನ ಗಮನಾರ್ಹ ವ್ಯಾಪಾರ ವಿಸ್ತರಣೆಯನ್ನು ಸೂಚಿಸುತ್ತಿದ್ದು, ಗ್ರಾಹಕರಿಗೆ ಹೊಸತನ, ಅಸಾಧಾರಣ ಸೇವೆ, ಅನುಭವ ಪಡೆಯಲು ಮತ್ತು ಉತ್ಪನ್ನಗಳ ಖರೀದಿಗೆ ಅವಕಾಶ ಮಾಡಿಕೊಡಲಿದೆ.
 ಕಂಪನಿ ಭಾರತದಲ್ಲಿ ತನ್ನ ಅಧಿಕೃತ ಎರಡು ಸ್ಟೋರ್‌ಗಳನ್ನು ಪ್ರಾರಂಭಿಸುತ್ತಿದ್ದು ಏ.20 ರಂದು ದೆಹಲಿಯಲ್ಲಿ  ಸಾಕೇತ್ ಮಳಿಗೆ ಅನಾವರಣಗೊಳ್ಳಲಿದೆ.